ಜಿಂದಾಲಿನಿಂದ ಪ್ರತಿದಿನ 650 ಮೆಟ್ರಿಕ್ ಟನ್ ಆಮ್ಲಜನಕ ಕರ್ನಾಟಕಕ್ಕೆ: ಸಚಿವ ಶೆಟ್ಟರ್

ಬಳ್ಳಾರಿ: ಜಿಂದಾಲ್ ಆಮ್ಲಜನಕ ಉತ್ಪಾದನೆ ಘಟಕಗಳಲ್ಲಿ ನಿತ್ಯ 1,000 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 650 ಮೆಟ್ರಿಕ್ ಟನ್ ಆಮ್ಲಜನಕವನ್ನು ರಾಜ್ಯಕ್ಕೆ ನೀಡುತ್ತಿದೆ.. ಇನ್ನೂ ಹೆಚ್ಚು ಆಮ್ಲಜನಕ ಉತ್ಪಾದನೆಗೆ ಸೂಚನೆ ನೀಡಿದ್ದೇನೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಜಿಂದಾಲ್ ಕಂಪನಿ ಕೋವಿಡ್‌ ರೋಗಿಗಳಿಗಾಗಿ ಒಂದು ಸಾವಿರ ಆಮ್ಲಜನಕದ ಬೆಡ್ ಸಿದ್ಧಗೊಳಿಸಿದೆ. ಇದರಿಂದ ಆಮ್ಲಜನಕ ಅಗತ್ಯ ಇರುವ ಕೊರೊನಾ ಸೋಂಕಿತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದುರಸ್ತಿಯಲ್ಲಿರುವ ಆಮ್ಲಜನಕ ಉತ್ಪಾದನಾ ಘಟಕಗಳು ಪುನಾರಂಭಗೊಳ್ಳಲಿವೆ. ಕೇಂದ್ರದಿಂದ ನಿತ್ಯ 1,200 ಮೆಟ್ರಿಕ್ ಟನ್ ಆಮ್ಲಜನಕ ಕರ್ನಾಟಕಕ್ಕೆ ದೊರಕುತ್ತಿದೆ ಎಂದು ತಿಳಿಸಿದರು.
ಕರ್ನಾಟಕಕ್ಕೆ ಹೆಚ್ಚಿನ ಆಮ್ಲಜನಕದ ಅವಶ್ಯಕತೆ ಇರುವುದರಿಂದ ನಾವು ರಾಜ್ಯಕ್ಕೆ ಪ್ರತಿದಿನ 1,700 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ ಮಾಡಬೇಕು ಎಂದು ಕೇಂದ್ರದ ಬಳಿ ಮನವಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement