ನಾಯಿ ಬೇಟೆಗೆ ಬಂದು ಮನಯೊಳಗೆ ಸಿಕ್ಕಿಬಿದ್ದ ಚಿರತೆ..!

ಚಿತ್ರದುರ್ಗ: ನಾಯಿ ಬೇಟೆಗೆ ಬಂದ ಚಿರತೆಯೊಂದು ಬೆಳಗಿನ ಜಾವ ಮನೆಗೆ ನುಗ್ಗಿ ತಾನು ಬಂಧಿಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಗ್ರಾಮದಲ್ಲಿ ನಡೆದ ಘಟನೆ ವರದಿಯಾಗಿದೆ.
ಮೇ 8ರಂದು ಮುಂಜಾನೆ ಈ ಘಟನೆ ನಡೆದಿದೆ ಎಂದು ಟಿವಿ-೯ ವರದಿ ಮಾಡಿದೆ. ವರದಿ ಪ್ರಕಾರ ಚಿರತೆ ನಾಯಿ ವಾಸನೆ ಹಿಡಿದು ಮನೆ ಯೊಳಗೆ ಬಂದಿದೆ. ಇದು ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ನಡೆದಿದ್ದು, ಬೆಳಗಿನ ಜಾವ 6.30 ರ ಸುಮಾರಿಗೆ ನೇತ್ರಾ ಎಂಬುವವರು ತಮ್ಮ ಮನೆ ಅಂಗಳದಲ್ಲಿ ಕಸ ಗುಡಿಸುತ್ತಿದ್ದರು. ಅದೇ ವೇಳೆಗೆ ನಾಯಿ ಜಾಡು ಹಿಡಿದು ಬಂದ ಚಿರತೆಯೊಂದು ಹಿಂಬಾಗಿಲಿನಿಂದ ಮನೆಗೆ ನುಗ್ಗಿದೆ.
ಮನೆಯೊಳಗೆಸದ್ದು ಮಾಡಿದ ಪ್ರಾಣಿ ನಾಯಿ ಇರಬಹುದೆಂದು ತಿರುಗಿ ನೋಡುವಷ್ಟರಲ್ಲಿ ಚಿರತೆ ಸದ್ದು ಮಾಡಿದೆ. ಇದರಿಂದ ಹೆಸರಿದ ನೇತ್ರಾ ಅವರು ತಕ್ಷಣ ಬಾಗಿಲು ಹಾಕಿದ್ದಾರೆ. ಆದರೆ ಮನೆಯೊಳಗೆ ಮಲಗಿದ್ದ ಎಚ್ಚರಗೊಂಡ ನೇತ್ರಾ ಅವರ ಪತಿ‌ ಚಿದಾನಂದ ಚಿರತೆ ಕಂಡು ಗಾಬರಿಯಾಗಿದ್ದಾರೆ.
ಬಾಗಿಲು ತೆಗೆಯುವಂತೆ ಹೆಂಡತಿಗೆ ಕೂಗಿದ ಬಳಿಕ‌ ಬಾಗಿಲು ತೆರೆದ ನಂತರ ಚಿದಾನಂದ ಹೊರಗೆ ಬಂದಿದ್ದಾರೆ. ಆಗ ಏನು ಮಾಡಬೇಕೆಂದು ತಿಳಿಯದ ಚಿರತೆ ಅಡುಗೆ ಮನೆಯೊಳಗೆ ಹೊಕ್ಕ ಸಾಮಗ್ರಿಗಳನ್ನು ಬೀಳಿಸಿ ಹಾಕಿದೆ. ಮತ್ತೊಂದು ಕಡೆ ಚಿರತೆ ಮನೆಯೊಳಗೆ ಬಂದ ಸುದ್ದಿ ತಿಳಿದುಜನರು ಸಾಮಾಜಿಕ ಅಂತರ, ಮಾಸ್ಕ್‌ ಮರೆತು ಸೇರಿದ್ದರು. ಕೆಲವರು ಮನೆ ಮೇಲ್ಛಾವಣಿ ಸಹ ಏರಿದ್ದರಂತೆ.
ಕೊನೆಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಸುದ್ದಿ ತಿಳಿದ ವಲಯ ಅರಣ್ಯಾಧಿಕಾರಿ ಸಂದೀಪ್ ನಾಯಕ್ ಮತ್ತು ತಂಡ ಆಗಮಿಸಿತು. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಒಂದು ಕಡೆ ಬಾಗಿಲಿಗೆ ಬೋನ್ ಇರಿಸಿ ಮತ್ತೊಂದು ಕಡೆ ಬಾಗಿಲಿಗೆ ಬಲೆ ಹಾಕಿ ಚಿರತೆ ಸೆರೆಗೆ ‌ಅಧಿಕಾರಿಗಳು ಸಿದ್ಧರಾದರು. ಆದರೆ ಚಿರತೆ‌ ತಡ ಮಾಡದೆ ಬೋನಿಗೆ ಬಿತ್ತು. ಸುಮಾರು ಒಂದೂವರೆ ವರ್ಷದ ಚಿರತೆ‌ ಇದಾಗಿದ್ದು, ಸದ್ಯ ಅರಣ್ಯಾಧಿಕಾರಿಗಳು‌ ಚಿರತೆಯನ್ನು ಆಡುಮಲ್ಲೇಶ್ವರ ಕಿರು ಪ್ರಾಣಿ‌ ಸಂಗ್ರಹಾಲಯದಲ್ಲಿರಿಸಿದ್ದಾರೆ. ಆರೋಗ್ಯ ತಪಾಸಣೆ ಬಳಿಕ ಮರಳಿ ಕಾಡಿಗೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ‌ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement