ಇದು ಶುಭ ಸುದ್ದಿ…ಡಿಆರ್‌ಡಿಒ ಬಹುನಿರೀಕ್ಷೆಯ ಕೊರೊನಾ ಔಷಧ ಮೇ ೧೧ರಿಂದಲೇ ಲಭ್ಯ..!

ನವ ದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ನಡುವೆಯೇ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ -ಡಿಆರ್‌ಡಿಒ ಅಭಿವೃದ್ಧಿ ಪಡಿಸಿರುವ ಕೊರೊನಾ ಔಷಧ ೨-ಡಿಜಿ ಮೇ ೧೧ ರಿಂದ ತುರ್ತು ಬಳಕೆಗೆ ಲಭ್ಯವಾಗಲಿದೆ.
ಈ ಕುರಿತು ಇಂಡಿಯಾ ಟಿವಿಗೆ ಭಾನುವಾರ ಡಿಆರ್‌ಡಿಒ ಮುಖ್ಯಸ್ಥ ಜಿ.ಸತೀಶ ರೆಡ್ಡಿ ಮಾಹಿತಿ ನೀಡಿದ್ದಾರೆ. ೨-ಡಯಾಕ್ಸಿ-ಡಿ-ಗ್ಲುಕೋಸ್ (೨-ಡಿಜಿ) ಪುಡಿ ರೂಪದಲ್ಲಿರುವ ಬಾಯಿಯಿಂದ ಸೇವಿಸಬಹುದಾದ ಈ ಔಷಧವು ಕೋವಿಡ್‌ಗೆ ಒಳಗಾಗಿ, ಆಸ್ಪತ್ರೆಗೆ ದಾಖಲಾದ ರೋಗಿಗಳು ಶೀಘ್ರವಾಗಿ ಗುಣಮುಖರಾಗಲು ನೆರವಾಗುತ್ತದೆ ಎಂದು ಡಿಆರ್‌ಡಿಒ ಹೇಳಿದೆ.
ಸಣ್ಣ ಪೊಟ್ಟಣಗಳಲ್ಲಿ ಪುಡಿಯ ರೂಪದಲ್ಲಿ ಬರುವ ಈ ಔಷಧವನ್ನು ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಬಹುದು. ಈ ಔಷಧವು ಸೋಂಕಿತ ಕೋಶಗಳ ಮೇಲೆ ಕಾರ್ಯಾಚರಣೆ ಮಾಡುವುದರಿಂದ ಜೀವ ಉಳಿಸಲು ನೆರವಾಗಲಿದೆ ಎಂಬುದು ಪ್ರಯೋಗಗಳಿಂದ ದೃಢಪಟ್ಟಿದೆ. ಕೋವಿಡ್ ಸೋಂಕು ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಜಿ. ಸತೀಶ್ ರೆಡ್ಡಿ ಹೇಳಿದ್ದಾರೆ.
ಕೋವಿಡ್ ಸೋಂಕಿನ ಲಕ್ಷಣಗಳನ್ನು ತಡೆಯುವಲ್ಲಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಔಷಧ ಸಹಕಾರಿಯಾಗಲಿದೆ. ಇದೇ ತಿಂಗಳ ೧೧ರಂದು ತುರ್ತು ಬಳಕೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಆಮ್ಲಜನಕ ಮಟ್ಟ ಹೆಚ್ಚಳ:
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರೋನಾ ಔಷಧ ದೇಹದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚು ಮಾಡಲು ಸಹಕಾರಿಯಾಗುವ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥ ಸತೀಶ್ ರೆಡ್ಡಿ ತಿಳಿಸಿದ್ದಾರೆ.
ಈ ಔಷಧ ಪಡೆದ ಮೂರು ದಿನಗಳಲ್ಲಿ ರೋಗಿಗಳ ಆರೋಗ್ಯ ಚೇತರಿಕೆಗೆ ಸಹಕಾರಿಯಾಗಲಿದೆ ಎಂದು ಕೂಡ ಹೇಳಿದ್ದಾರೆ.
ನ್ಯೂಕ್ಲಿಯರ್ ಮೆಡಿಸಿನ್ ಸಂಸ್ಥೆ ಮತ್ತು ಅಲೈಲ್ಡ್ ಸೈನ್ಸ್, ಹಾಗು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹೈದರಾಬಾದಿನ ಡಾಕ್ಟರ್ ರೆಡ್ಡೀಸ್ ಪ್ರಯೋಗಾಲಯದ ಸಹಕಾರದೊಂದಿಗೆ ಈ ಔಷಧವನ್ನು ಅಭಿವೃದ್ಧಿಪಡಿಸಿದೆ.
ಆಮ್ಲಜನಕ ಸಹಾಯದಲ್ಲಿರುವ ರೋಗಿಗಳ ಒತ್ತಡವನ್ನು ಕಡಿಮೆ ಮಾಡಲು ಕೂಡ ಪ್ರಸಾರವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕಿನ ಲಕ್ಷಣಗಳು ಇರುವ ಮಂದಿ ಈ ಔಷಧವನ್ನು ತೆಗೆದುಕೊಳ್ಳಲು ಭಾರತೀಯ ಔಷಧ ಮಹಾನಿಯಂತ್ರಕ (ಡಿಜಿಸಿಐ) ಈಗಾಗಲೇ ಅನುಮತಿ ನೀಡಿದ್ದು, ಇದರಿಂದ ದೇಶದಲ್ಲಿ ಕೊರೊನಾ ಸೋಂಕಿತರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

4.1 / 5. 11

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement