ಮಾರ್ಗಸೂಚಿಯಲ್ಲಿ ಬದಲಾವಣೆ.. ಅಗತ್ಯವಸ್ತು ಖರೀದಿಗೆ ಮಾತ್ರ ವಾಹನ ಬಳಸಬಹುದು-ಡಿಜಿಪಿ ಟ್ವೀಟ್‌

ಬೆಂಗಳೂರು:ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ದಿನಸಿ, ತರಕಾರಿ ಸೇರಿದಂತೆ ಅಗತ್ಯವಸ್ತು ಖರೀದಿಸಲು ವಾಹನ ಬಳಸಬಹುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಸೋಮವಾರ ಸಂಜೆ ಈ ಕುರಿತು ಟ್ವೀಟ್ ಮಾಡಿದೆ.
ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಟ್ವೀಟ್ ಮಾಡಿದ್ದು, , ತರಕಾರಿ, ದಿನಸಿ ತರಲು ವಾಹನ ಬಳಕೆ ಮಾಡಲು ಅನುಮತಿ ನೀಡಲಾಗಿದೆ,ನಿಮ್ಮ ಊರಿನ ಸಮೀಪ ಸುತ್ತಮುತ್ತಲೂ ತರಕಾರಿ, ದಿನಸಿ ತರಲು ವಾಹನ ಬಳಸಬಹುದು ಎಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. ಅಗತ್ಯವಸ್ತು ಖರೀದಿಸಲು ವಾಹನ ಬಳಸಬಹುದು, ಆದರೆ ಅನಗತ್ಯ ತಿರುಗಾಟಕ್ಕೆ ಅಲ್ಲ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರ 14 ದಿನ ಲಾಕ್ ಡೌನ್ ವಿಧಿಸಿ ಹೊರಡಿಸಿದ ಮಾರ್ಗಸೂಚಿಯಲ್ಲಿ ತರಕಾರಿ, ದಿನಸಿ ತರಲು ನಡೆದುಕೊಂಡೇ ಹೋಗಬೇಕು ಎಂದು ಷರತ್ತು ಹಾಕಿತ್ತು. ಈ ಹಿನ್ನೆಲೆ ಸೋಮವಾರ ಹಲವು ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪೊಲೀಸ್ ಮಹಾನಿರ್ದೇಶಕರು ಈ ಕುರಿತು ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement