ಇಟಲಿಯಲ್ಲಿ ಮಹಿಳೆಗೆ ಆರು ಡೋಸ್ ಫಿಜರ್ ಕೋವಿಡ್ ಲಸಿಕೆ ನೀಡಿದ ನರ್ಸ್‌..!

ರೋಮ್: ಫಿಜರ್ ಬಯೋಎನ್ಟೆಕ್ ಕೋವಿಡ್ -19 ಲಸಿಕೆಯ ಆರು ಪ್ರಮಾಣ (ಡೋಸ್‌) ನೀಡಿದ ನಂತರ 23 ವರ್ಷದ ಯುವತಿಯನ್ನು ಇಟಲಿಯ ಟಸ್ಕನಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಯಾವುದೇ ಪ್ರತಿಕೂಲ ಪ್ರತಿಕ್ರಿಯೆಗಾಗಿ (ರಿಯಾಕ್ಷನ್‌) ಆಕೆಯನ್ನು ಮೇಲ್ವಿಚಾರಣೆ ಮಾಡಲಾಗಿದ್ದ ಆಸ್ಪತ್ರೆಯಿಂದ ಈಗ ಬಿಡುಗಡೆ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಭಾನುವಾರ ಮಹಿಳೆಗೆ ಕೋವಿಡ್ -19 ಲಸಿಕೆ ನೀಡಲಾಗಿದೆ ಎಂದು ನೋವಾ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. ಆರೋಗ್ಯ ಕಾರ್ಯಕರ್ತ ಆಕಸ್ಮಿಕವಾಗಿ ಲಸಿಕೆಯ ಸಂಪೂರ್ಣ ಬಾಟಲಿಯೊಂದಿಗೆ ಸಿರಿಂಜ್ ಅನ್ನು ತುಂಬಿಸಿ ಮಹಿಳೆಗೆ ನೀಡಿದರು. ಬಾಟಲಿಯಲ್ಲಿ ಆರು ಪ್ರಮಾಣಗಳಿತ್ತು.
ಐದು ಖಾಲಿ ಸಿರಿಂಜನ್ನು ನೋಡಿದ ನಂತರ ಆರೋಗ್ಯ ಕಾರ್ಯಕರ್ತಳು ತನ್ನ ತಪ್ಪನ್ನು ಅರಿತುಕೊಂಡಳು. ರೋಗಿಯು ಆರೋಗ್ಯವಾಗಿದ್ದರಿಂದ ಅವರನ್ನು 24 ಗಂಟೆಗಳ ಕಾಲ ಕಟ್ಟುನಿಟ್ಟಿನ ವೀಕ್ಷಣೆಯಲ್ಲಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಸಿಎನ್‌ಎನ್‌ನಲ್ಲಿನ ವರದಿಯ ಪ್ರಕಾರ ಆಕೆಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.
ಬೃಹತ್ ಪ್ರಮಾಣದ ಲಸಿಕೆ” ಗೆ ರೋಗಿಯ ರೋಗನಿರೋಧಕ ಪ್ರತಿಕ್ರಿಯೆಯನ್ನು ವೈದ್ಯರು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಮಹಿಳೆ ಆಸ್ಪತ್ರೆಯ ಮನೋವಿಜ್ಞಾನ ವಿಭಾಗದಲ್ಲಿ ಇಂಟರ್ನ್ ಆಗಿದ್ದಾಳೆ.
ತನಿಖೆಯನ್ನು ಪ್ರಾರಂಭಿಸಲಾಗಿದ್ದರೂ, ಆಸ್ಪತ್ರೆಯ ವಕ್ತಾರರು “ಇದು ಕೇವಲ ಮಾನವ ದೋಷ, ಖಂಡಿತವಾಗಿಯೂ ಉದ್ದೇಶಪೂರ್ವಕವಾಗಿಲ್ಲ” ಎಂದು ಹೇಳಿದರು.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement