ಒಲಿ ಸರ್ಕಾರ ಪತನ: ಸರ್ಕಾರ ರಚನೆಗೆ ರಾಜಕೀಯ ಪಕ್ಷಗಳಿಗೆ ನೇಪಾಳ ರಾಷ್ಟ್ರಪತಿ ಆಹ್ವಾನ

ಕಠ್ಮಂಡು: ನೇಪಾಳ ಪ್ರಧಾನ ಮಂತ್ರಿ ಕೆ.ಪಿ.ಶರ್ಮಾ ಒಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿರುವುದರಿಂದ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸುವಂತೆ ರಾಷ್ಟ್ರಪತಿ ಬಿದ್ಯಾದೇವಿ ಭಂಡಾರಿ ರಾಜಕೀಯ ಪಕ್ಷಗಳನ್ನು ಆಹ್ವಾನಿಸಿದ್ದಾರೆ.
ನೇಪಾಳ ಸಂವಿಧಾನದ ಅರ್ಟಿಕಲ್ 76(2) ಕಲಂ ಪ್ರಕಾರ ಬಹುಮತ ಸಾಬೀತುಪಡಿಸುವ ಸಾಮರ್ಥ್ಯವಿರುವ ರಾಜಕೀಯ ಪಕ್ಷಗಳು ಸರ್ಕಾರ ರಚನೆಗೆ ಹಕ್ಕು ಮಂಡಿಸುವಂತೆ ರಾಷ್ಟ್ರಪತಿಗಳು ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರಪತಿಗಳು ಮೂರು ದಿನಗಳ ಗಡುವು ನೀಡಿದ್ದು ರಾಜಕೀಯ ಪಕ್ಷಗಳು ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲದ ಮಾಹಿತಿಯೊಂದಿಗೆ ತಮ್ಮ ಹಕ್ಕು ಮಂಡಿಸಬೇಕು ಎಂದು ರಾಷ್ಟ್ರಪತಿಗಳು ಸೂಚಿಸಿದ್ದಾರೆ ಎಂದು ನೇಪಾಳಿ ಮಾಧ್ಯಮಗಳು ವರದಿ ಮಾಡಿವೆ.
ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಲು ಬಯಸಿದ್ದರೆ ಮೈತ್ರಿ ಪಕ್ಷಗಳ ಸದಸ್ಯರ ಸಹಿಯುಳ್ಳ ಒಪ್ಪಿಗೆ ಪತ್ರವನ್ನು ರಾಷ್ಟ್ರಪತಿಗಳ ಗಮನಕ್ಕೆ ತರಬೇಕಾಗುತ್ತದೆ.
ಒಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ನೇಪಾಳ ಕಮ್ಯೂನಿಷ್ಟ್ ಪಾರ್ಟಿ ವಾಪಸ್ ಪಡೆದ ಹಿನ್ನಲೆಯಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಪ್ರಧಾನಿ ಒಲಿ ವಿಫಲರಾಗಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement