ಕರ್ನಾಟಕದಲ್ಲಿ ಲಸಿಕೆ ಕೊರತೆ ಇಲ್ಲ, ಗೊಂದಲ ತಪ್ಪಿಸಲು ಹಂತಹಂತವಾಗಿ ನೀಡ್ತೇವೆ : ಡಿಸಿಎಂ

ಬೆಂಗಳೂರು : ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ. ಆದರೆ ಗೊಂದಲ ತಪ್ಪಿಸಲು ಹಂತಹಂತವಾಗಿ ಲಸಿಕೆ ಕೊಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ. ಸಿ.ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ.
ಆಮ್ಲಜನಕ ಸಾಂದ್ರತೆ ಉದ್ಘಾಟನೆ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡನೇ ಡೋಸ್ ಮತ್ತು ಮೊದಲ ಡೋಸ್ ಮಧ್ಯೆ ಗೊಂದಲವಾಗುತ್ತಿದೆ. ಮೊದಲ ಬಂದವರಿಗೆ ಮೊದಲ ಆದ್ಯತೆ. ಮುಂದಿನ ದಿನಗಳಲ್ಲಿ ಆನ್ ಲೈನ್ ಮೂಲಕ ನೋಂದಾಯಿಸಿಕೊಂಡು ಬಂದವರಿಗೂ ಸರಿಯಾದ ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದರು.
ಈಗ ಆಮ್ಲಜನಕದ ಅವಶ್ಯಕತೆ ಹೆಚ್ಚು ಯಾರಿಗಿದೆ ಎಂದು ಪತ್ತೆ ಮಾಡಬೇಕಿದೆ. ಆಮ್ಲಜನಕ ಕಡಿಮೆ ಅವಶ್ಯಕತೆಯಿದ್ದವರಿಗೆ ಆಮ್ಲಜನಕ ಸಾಂದ್ರಕಗಳ ಮೂಲಕ ನೀಡುವ ವ್ಯವಸ್ಥೆ ಮಾಡುತ್ತಿದ್ದೇವೆ. ಅಂತಹವರಿಗೆ ಅವರ ಅವಶ್ಯಕತೆಗೆ ಗಿವ್ ಇಂಡಿಯಾ ಸಂಸ್ಥೆ ಸಹಯೋಗದೊಂದಿಗೆ ಹೊಸ ಯೋಜನೆ ಕಾರ್ಯಗತ ಮಾಡುತ್ತಿದ್ದೇವೆ. ಆಮ್ಲಜನಕದ ಅವಶ್ಯಕತೆ ಇರುವವರಿಗೆ ಓಲಾ ಕಂಪನಿ ಸಹಯೋಗದಲ್ಲಿ ಮನೆಗೇ ಪೂರೈಕೆ ಮಾಡುವ ಯೋಓಜನೆ ಇದು ಎಂದು ಮಾಹಿತಿ ನೀಡಿದರು.
ಅವಶ್ಯಕತೆ ಇದ್ದವರು ಓಲಾ ಆಪ್ ಮೂಲಕ ಆಮ್ಲಜನಕ ತರಿಸಿಕೊಳ್ಳಬಹುದು. ಐದು ಸಾವಿರ ರೂಪಾಯಿ ಡೆಪಾಸಿಟ್ ಇಡಬೇಕಾಗುತ್ತದೆ. ಇದನ್ನು ಮರಳಿ ಕೊಡಲಾಗುತ್ತದೆ. ಇದನ್ನು ಬೆಂಗಳೂರಿನ ಎಲ್ಲೆಡೆ ವಿಸ್ತರಣೆ ಮಾಡುವ ಉದ್ದೇಶ ಇದೆ. ಡೆಪಾಸಿಟ್ ಬಿಟ್ಟರೆ ಸೇವೆ ಉಚಿತ. ಡೆಪಾಸಿಟ್ ನಂತರ ಅವರಿಗೇ ಹಿಂತಿರುಗಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಆಕ್ಸಿಜನ್ ಬೇಕಾದವರಿಗೆ ಓಲಾ ಮೂಲಕ ಮನೆ ಮನೆಗೂ ತಲುಪಿಸಲಾಗುತ್ತದೆ.ಇಡೀ ಬೆಂಗಳೂರಿಗೆ ಈ ಆಮ್ಲಜನಕ ಸಾಂದ್ರಕ ಬಳಕೆಯಾಗುತ್ತದೆ. ಇದನ್ನು ಇಡೀ ರಾಜ್ಯಾದ್ಯಂತ ವಿಸ್ತರಣೆ ಮಾಡುವ ಕೆಲಸ ಮಾಡುತ್ತೇವೆ. ಓಲಾ ಅಪ್ಲಿಕೇಶನ್ ಇದ್ರೆ ಸಾಕು ಮನೆಗೆ ಆಮ್ಲಜನಕ ಕವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೊರೊನಾ ಟೆಸ್ಟಿಂಗ್ ಕಡಿಮೆ ಆಗಿರುವ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿಗಳು, ಸಾಮರ್ಥ್ಯಕ್ಕಿಂತಲೂ ಹೆಚ್ಚು ಟೆಸ್ಟ್ ಮಾಡುತ್ತಿದ್ದೇವೆ. ಆದರೆ ಟೆಸ್ಟ ಹೆಚ್ಚಿಸಬೇಕೆಂಬ ಕಾರಣಕ್ಕೆ ಅನಗತ್ಯ ಹೆಚ್ಚು ಮಾಡಿದ್ದರಿಂದ ಯಾರಿಗೆ ವರದಿ ಬೇಗ ಸಿಗಬೇಕಿತ್ತೋ ಅವರಿಗೆ ಸಿಗುವುದು ತಡವಾಗುತ್ತಿತ್ತು. ಇದನ್ನು ತಪ್ಪಿಸಿ ವರದಿ ವೇಗವಾಗಿ ಸಿಗುವಂತೆ ಮಾಡಲು ಎನ್ನುವ ಕಾರಣಕ್ಕೆ ರೋಗ ಲಕ್ಷಣ ಇರುವವರಿಗೆ ಹೆಚ್ಚು ಒತ್ತು ನೀಡಿ ಟೆಸ್ಟ್ ಮಾಡ್ತಿದ್ದೇವೆ ಎಂದು ವಿವರಿಸಿದರು.
ಪಾಸಿಟಿವಿಟಿ ರೇಟ್ ಕಡಿಮೆ ತೋರಿಸಲು ಟೆಸ್ಟ್ ಕಡಿಮೆ ಮಾಡುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ. ಹಾಗೆ ವಿಚಾರ ಮಾಡಿದರೆ ಕಡಿಮೆ ಟೆಸ್ಟ್ ಮಾಡಿ ಪ್ರಕರಣಗಳು ಇದೇ ರೀತಿ ಮುಂದುವರಿದರೆ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತದೆ. ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡುತ್ತಿಲ್ಲ. ಬೇಗ ರಿಪೋರ್ಟ್ ಸಿಗಬೇಕು ಎನ್ನುವ ಕಾರಣಕ್ಕೆಲಕ್ಷಣವಿದ್ದವರಿಗೆ ಟೆಸ್ಟಿಗೆ ಆದ್ಯತೆ ನೀಡಿ ಸ್ವಲ್ಪ ಕಡಿಮೆ ಮಾಡಿದ್ದೇವೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಜಗತ್ತಿಗೆ ಹೇಳುವ ಮೊದಲೇ ಪಾಕಿಸ್ತಾನಕ್ಕೆ ತಿಳಿಸಿದ್ದೆ ; ಬಾಲಾಕೋಟ್ ಸ್ಟ್ರೈಕ್ ಬಗ್ಗೆ ಬಿಚ್ಚಿಟ್ಟ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement