ತೌಕ್ಟೆ ಚಂಡಮಾರುತ :ಮೇ 14 ರಿಂದ ಕರ್ನಾಟಕ ಸೇರಿ ಕೆಲವು ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ..!

ನವ ದೆಹಲಿ: ವರ್ಷದ ಮೊದಲ ಚಂಡಮಾರುತ ಮೇ 15-16ರಂದು ಅರಬ್ಬಿಸಮುದ್ರದಲ್ಲಿ ರೂಪುಗೊಳ್ಳಲಿದ್ದು, ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮೇ 14 ರಂದು ಬೆಳಗ್ಗೆ ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಒತ್ತಡ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ವರ್ಷದ ಮೊದಲ ಚಂಡಮಾರುತ ಬೀಸಬಹುದು ಎಂದು ಊಹಿಸಲಾಗಿದೆ.
ಹೀಗಾಗಿ ಮೇ 15ರ ವರೆಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಚಂಡಮಾರುತಕ್ಕೆ ತೌಕ್ಟೆ ಎಂದು ಹೆಸರಿಡಲಾಗಿದೆ. ಈ ಚಂಡಮಾರುತಕ್ಕೆ ಮಯನ್ಮಾರ್ ಹೆಸರನ್ನಿಟ್ಟಿದೆ.ಹೀಗಾಗಿ ಕರಾವಳಿ ಭಾಗದಲ್ಲಿ ಮುಂದಿನ ಒಂದು ವಾರಗಳ ಕಾಲ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಮೇ 16ರಷ್ಟೊತ್ತಿಗೆ ಚಂಡಮಾರುತ ತೀವ್ರವಾಗುವ ನಿರೀಕ್ಷೆ ಇದೆ, ಮೇ 15 ರಂದು ಗೋವಾ ಹಾಗೂ ಮಹಾರಾಷ್ಟ್ರದಲ್ಲೂ ಇದೇ ಪರಿಸ್ಥಿತಿ ಮುಂದುವರಿಯಲಿದೆ.
ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿಮೀ ಇರಲಿದೆ, ಚಂಡಮಾರುತವು ಮಾಲ್ಡೀವ್ಸ್, ಲಕ್ಷದ್ವೀಪಗಳಿಗೆ ಗುರುವಾರ ಅಪ್ಪಳಿಸುವ ನಿರೀಕ್ಷೆ ಇದ್ದು, ಕೇರಳ, ಕರ್ನಾಟಕ,, ಗೋವಾ ಹಾಗೂ ಮಹಾರಾಷ್ಟ್ರದ ಸಮುದ್ರ ತೀರಗಳಲ್ಲಿ ಇದೇ ರೀತಿ ಬಿರುಸಾದ ಗಾಳಿ ಬೀಸುವ ನಿರೀಕ್ಷೆಯಿದೆ.ಹೀಗಾಗಿ ಮುಂದಿನ ವಾರಗಳಲ್ಲಿ ಕೆಲವು ದಿನ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

4.2 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement