ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ಕರ್ನಾಟದಲ್ಲಿ ರಾಜ್ಯದಲ್ಲಿ ಗುರುವಾರ ಮತ್ತೆ 35,297 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ.
ಇದೇ ಸಮಯದಲ್ಲಿ ಒಟ್ಟು 344 ಮಂದಿ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 20,88, 488ಕ್ಕೆ ಏರಿದೆ. ಬುಧವಾರಕ್ಕೆ ಹೋಲಿಲಿಸದರೆ ಸಾವಿನ ಸಂಖ್ಯೆಯಲ್ಲಿ ಇಳಿಮುಖ ಕಂಡಿದ್ದು, ರಾಜ್ಯದಲ್ಲಿ ಈ ಮೂಲಕ ರಾಜ್ಯದಲ್ಲಿ ಒಟ್ಟು ಕೋವಿಡ್ ಸಾವಿನ ಸಂಖ್ಯೆ 20,712 ಆಗಿದೆ.
ರಾಜ್ಯದಲ್ಲಿಂದು ಕೊರೊನಾದಿಂದ ಗುಣಮುಖರಾಗಿ 34,057 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ 5,93,078 ಸಕ್ರಿಯ ಕೋವಿಡ್ ಪ್ರಕರಣಗಳಿವೆ.
ಗುರುವಾರ ಕೊರೋನಾ ಸೋಂಕಿನ ಪ್ರಮಾಣ ಶೇ.27.64 ರಷ್ಟುದೆ, ಸಾವಿನ ಶೇಕಡಾವಾರು ಪ್ರಮಾಣ ಶೇ. 0.97ರಷ್ಟಿದೆ.
ಇದೇ ಸಮಯದಲ್ಲಿ ಬಳ್ಳಾರಿಯಲ್ಲಿ 14, ಬೆಂಗಳೂರು ಗ್ರಾಮಾಂತರದಲ್ಲಿ 13, ಬೆಂಗಳೂರು ನಗರದಲ್ಲಿ 161, ಬೀದರ್ 4, ಚಾಮರಾಜನಗರ 5, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 1, ಚಿತ್ರದುರ್ಗ 1, ದಕ್ಷಿಣ ಕನ್ನಡ 5, ಧಾರವಾಡ 9, ಗದಗ 5, ಹಾಸನ 10, ಹಾವೇರಿ 9, ಕಲಬುರಗಿ 1, ಕೊಡಗು 5, ಕೋಲಾರ 3, ಕೊಪ್ಪಳ 4, ಮಂಡ್ಯ 11, ಮೈಸೂರು 15 , ರಾಯಚೂರು 4, ರಾಮನಗರ 4, ಶಿವಮೊಗ್ಗ 10, ತುಮಕೂರು 11, ಉಡುಪಿ 6, ಉತ್ತರ ಕನ್ನಡ 14, ವಿಜಯಪುರ 8, ಯಾದಗಿರಿಯಲ್ಲಿ 5 ಮಂದಿ ಕೋವಿಡ್ನಿಂದ ಸಾವಿಗೀಡಾಗಿದ್ದಾರೆ.
ಜಿಲ್ಲಾವಾರು ಮಾಹಿತಿ ಪಿಎಇಎಫ್‌ನಲ್ಲಿ ಕೊಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ