ಉತ್ತರ ಪ್ರದೇಶ ಕೋವಿಡ್ ಭಯಾನಕ..?: ಗಂಗಾನದಿಯಲ್ಲಿ ಶವಗಳು ತೇಲುತ್ತಿರುವ ಘಟನೆ ನಂತರ ಉನ್ನಾವೊದಲ್ಲಿ ಮರಳಿನಲ್ಲಿ ಹೂತ ಶವಗಳು ಪತ್ತೆ..!

ಉನ್ನಾವೊ: ಉತ್ತರ ಪ್ರದೇಶ ಮತ್ತು ಬಿಹಾರದ ಗಂಗಾ ನದಿಯ ತೀರದಲ್ಲಿ ಶಂಕಿತ ಕೋವಿಡ್‌ -19 ರೋಗಿಗಳ ಶವಗಳು ಕಂಡುಬಂದ ಎರಡು ದಿನಗಳ ನಂತರ, ಉನ್ನಾವೊದಲ್ಲಿ ಮರಳಿನಲ್ಲಿ ಹೂತಿರುವ ಶವಗಳು ಪತ್ತೆಯಾಗಿದೆ.
ಸ್ಥಳೀಯ ಪೊಲೀಸರ ತಂಡ ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ದೇಹಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಈ ಬಗ್ಗೆ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದರ್ ಕುಮಾರ್ ಅವರ ಪ್ರಕಾರ, ಶವಗಳನ್ನು ನದಿಯಿಂದ ದೂರದಲ್ಲಿರುವ ಪ್ರದೇಶದಲ್ಲಿ ಹೂಳಲಾಗಿದೆ.
ನಮ್ಮ ತಂಡವು ನದಿಯಿಂದ ದೂರದಲ್ಲಿರುವ ಪ್ರದೇಶದಲ್ಲಿ ಸಮಾಧಿ ಮಾಡಿದ ಶವಗಳನ್ನು ಪತ್ತೆ ಮಾಡಿದೆ. ಇತರ ಪ್ರದೇಶಗಳಲ್ಲಿ ಹೆಚ್ಚಿನ ಶವಗಳಿಗಾಗಿ ಶೋಧ ನಡೆಸಲಾಗುತ್ತಿದೆ. ತನಿಖೆ ನಡೆಸಲು ತಂಡಕ್ಕೆ ಸೂಚಿಸಿದ್ದೇನೆ. ತನಿಖೆ ನಂತರ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ ಎಂದು ವರದಿ ಹೇಳಿದೆ.
ಕಳೆದ ಎರಡು ದಿನಗಳಿಂದ, ಉತ್ತರ ಪ್ರದೇಶದ ಗಾಜಿಪುರ ಮತ್ತು ಬಿಹಾರದ ಬಕ್ಸಾರ್‌ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ಮೃತ ದೇಹಗಳು ತೇಲುತ್ತಿರುವ ಭೀಕರ ದೃಶ್ಯಗಳು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದ್ದು, ಶವಗಳು ಮೃತ ಕೋವಿಡ್‌ ರೋಗಿಗಳದ್ದೆಂಬ ಆತಂಕ ವ್ಯಕ್ತವಾಗಿದೆ.
ಬಿಹಾರ ಸಚಿವ ಸಂಜಯ್ ಕುಮಾರ್ ಝಾ ಪ್ರಕಾರ, ಬಕ್ಸಾರ್ ಜಿಲ್ಲೆಯಲ್ಲ ಗಂಗಾ ನದಿಯಿಂದ 71 ಶವಗಳನ್ನು ಹೊರತೆಗೆಯಲಾಯಿತು ಮತ್ತು ಅವರ ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು ಮತ್ತು ಉತ್ತರ ಪ್ರದೇಶ ಮತ್ತು ಬಿಹಾರದ ಗಡಿಯಲ್ಲಿರುವ ರಾಣಿಘಾಟಿನ ಗಂಗಾ ನದಿಯಲ್ಲಿ ಮತ್ತೆ ಯಾವುದೇ ರೀತಿಯ ಘಟನೆ ಸಂಭವಿಸದಂತೆ ತಡೆಯಲು ಬಲೆಯನ್ನು ಹಾಕಲಾಗಿದೆ.
ಈ ಘಟನೆಗಳು ದೇಶದ ಕೋವಿಡ್ ಬಿಕ್ಕಟ್ಟಿನ ಪ್ರಮಾಣದ ಬಗ್ಗೆ ಭಯ ಹುಟ್ಟಿಸಿವೆ. ವೈರಸ್‌ಗೆ ಬಲಿಯಾದವರ ಸಂಬಂಧಿಕರು, ಕೊನೆಯ ವಿಧಿಗಳಿಗೆ ಸ್ಥಳವನ್ನು ಹುಡುಕಲು ಸಾಧ್ಯವಾಗದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement