ಕಠ್ಮಂಡು: ಅದೃಷ್ಟ ಅಂದರೆ ಇದಪ್ಪ.. ಕೆ.ಪಿ. ಶರ್ಮಾ ಒಲಿ ಅವರಿಗೆ ಅದೃಷ್ಟವೋ ಅದೃಷ್ಟ..ಅವರಿಗೆ ಅದೃಷ್ಟ ಹೇಗಿದೆಯೆಂದರೆ ಮೂರು ದಿನಗಳ ಹಿಂದೆ ಬಹುಮತ ಸಾಬೀತಪಡಿಸಲುವಲ್ಲಿ ಸೋಲನುಭವಿಸಿದರೂ ಈಗ ಮತ್ತೆ ಪ್ರಧಾನಿಯಾಗುವ ಯೋಗಬಂದಿದೆ ಈಗ ಪ್ರದಾನಿಯಾಗಿ ಮತ್ತೆ ಅವರು ಅಧಿಕಾರ ನಡೆಸಲಿದ್ದಾರೆ. ಅದೃಷ್ಟ ಅಂದರೆ ಇದಪ್ಪ.
ಮೂರು ದಿನಗಳ ಹಿಂದೆ ನೇಪಾಳಿ ಸಂಸತ್‌ನಲ್ಲಿ ಬಹುಮತ ಕಳೆದುಕೊಂಡ ಅವರಿಗೆ ಮತ್ತೊಮ್ಮೆ ಪ್ರಧಾನಿಯಾಗುವ ಅವಕಾಶ ಸಿಕ್ಕಿದೆ. ಹೊಸ ಸರ್ಕಾರ ರಚನೆಗೆ ನೇಪಾಳ ಅಧ್ಯಕ್ಷೆ ಭಂಡಾರಿ ಅವರು ನೀಡಿದ್ದ ಮೂರು ದಿನಗಳ ಡೆಡ್‌ಲೈನ್ ಮುಗಿದ ನಂತರ ಅವರಿಗೆ ಮತ್ತೆ ಪಟ್ಟ ಕಟ್ಟುವ ನಿರ್ಧಾರ ಕೈಗೊಳ್ಳಲಾಗಿದೆ.
ನೇಪಾಳದ ವಿಪಕ್ಷಗಳು ಸರ್ಕಾರ ರಚಿಸಲು ವಿಫಲವಾದ ಹಿನ್ನೆಲೆ ಮತ್ತೊಮ್ಮೆ ಒಲಿ ಅವರನ್ನೇ ಆರಿಸಲಾಗಿದೆ.
ಮೇ 10ರಂದು ವಿಶ್ವಾಸಮತ ಯಾಚನೆ ನಡೆದಿತ್ತು. ನೇಪಾಳ ಸಂಸತ್ ಕೆಳಮನೆಯಲ್ಲಿ 275 ಸದಸ್ಯರಿದ್ದು ಈ ಪೈಕಿ ನಾಲ್ವರು ಅಮಾನತುಗೊಂಡಿದ್ದರು. ಹೀಗಾಗಿ ವಿಶ್ವಾಸ ಮತಯಾಚನೆಗೆ ಮುಂದಾಗಿದ್ದ ಒಲಿಗೆ 136 ಮತ ಬೇಕಿದ್ದರೂ ಅವರು ನೂರು ಮತಗಳನ್ನು ಪಡೆಯಲೂ ವಿಫಲರಾದರು.
ಹೀಗಾಗಿ ಅವರ ಸರ್ಕಾರ ಬಿದ್ದು ಹೋಗಿತ್ತು. ನೇಪಾಳ ಸಂವಿಧಾನದ 76 (2)ನೇ ವಿಧಿಯ ಅನ್ವಯ ಹೊಸ ಸರ್ಕಾರ ರಚಿಸಲು ಅಧ್ಯಕ್ಷರು ಮೂರು ದಿನದ ಸಮಯ ನೀಡಿ ವಿಪಕ್ಷಗಳಿಗೆ ಆಹ್ವಾನ ನೀಡಿದ್ದರು. ಆದರೆ ಡೆಡ್‌ಲೈನ್ ಮುಗಿದರೂ ಯಾವುದೇ ಪಕ್ಷ ಸರ್ಕಾರ ರಚಿಸಲಿಲ್ಲ. ಹೀಗಾಗಿ ಒಲಿ ಅವರನ್ನೇ ಮತ್ತೆ ಪ್ರಧಾನಿ ಹುದ್ದೆಯಲ್ಲಿ ಕೂಡ್ರಿಸಲಾಗಿದೆ.
ಹೊಸ ಸರ್ಕಾರ ರಚನೆಗೆ ನೇಪಾಳಿ ಕಾಂಗ್ರೆಸ್‌ಗೆ ಇತರ ವಿರೋಧ ಪಕ್ಷಗಳು ಬೆಂಬಲ ನೀಡಿದ್ದರೂ ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ನೇಪಾಳಿ ಕಾಂಗ್ರೆಸ್ ಸರ್ಕಾರ ರಚಿಸಲು ಮುಂದಾದರೆ ಬೆಂಬಲಿಸುತ್ತೇವೆ ಎಂದು ಜನತಾ ಸಮಾಜವಾದಿ ಪಕ್ಷ ಮತ್ತು ಸಿಪಿಎನ್ ಘೋಷಿಸಿದ್ದವು. ಆದರೂ ಕಾಂಗ್ರೆಸ್ ಹೂಡಿದ್ದ ಪ್ಲ್ಯಾನ್ ಫ್ಲಾಪ್ ಆದವು.
ಕಡೆಗೆ ಅಧ್ಯಕ್ಷರು ಕೊಟ್ಟ ಗಡುವು ಮುಗಿದು, ಸೋತರೂ ಒಲಿ ಪಾಲಿಗೆ ಮತ್ತೊಮ್ಮೆ ಪ್ರಧಾನಿ ಪಟ್ಟ ಒಲಿದು ಬಂದಿದೆ. ನೇಪಾಳ ವಿಪಕ್ಷಗಳು ಸರ್ಕಾರ ರಚಿಸಲು ವಿಫಲವಾಗಿವೆ. ಆದರೆ ಒಂದು ತಿಂಗಳೊಳಗೆ ಅವರಿಗೆ ಬಹುಮತ ಸಾಬೀತು ಪಡಿಸಲು ಸೂಚಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ