ಸ್ವಾತಂತ್ರ್ಯ ಸೇನಾನಿ ಶಹೀದ್‌ ಭಗತ್‌ ಸಿಂಗ್‌ ತಮ್ಮನ ಮಗ ಕೊರೊನಾದಿಂದ ನಿಧನ

ಚಂಡೀಗಡ: ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ನಾಯಕ ಶಹೀದ್‌ ಭಗತ್ ಸಿಂಗ್ ಅವರ ತಮ್ಮನ ಮಗ ಅಭಯ್ ಸಿಂಗ್ ಸಂಧು ಕೋವಿಡ್‌-19 ನಿಂದ ನಿಧನರಾಗಿದ್ದಾರೆ.
ರಾಜ್ಯ ಸರ್ಕಾರದ ಪತ್ರಿಕಾ ಪ್ರಕಟಣೆ ಶುಕ್ರವಾರ ತಿಳಿಸಿದೆ ಎಂದು ದಿ ಟ್ರಿಬ್ಯೂನ್‌ ವರದಿ ಮಾಡಿದೆ. ಅಭಯ್ ಸಿಂಗ್ ಸಂಧು ಕ್ರಾಂತಿಕಾರಿ ನಾಯಕ ಭಗತ್ ಸಿಂಗ್ ಅವರ ಕಿರಿಯ ಸಹೋದರ ಕುಲ್ಬೀರ್ ಸಿಂಗ್ ಅವರ ಮಗ. ಅವರು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಪಂಜಾಬ್ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು ಸಂತಾಪ ಸೂಚಿಸಿದ್ದು, ಸಾಮಾಜಿಕ ಕಾರ್ಯಕರ್ತರಾಗಿ ಅವರು ಮಾಡಿದ ಕಾರ್ಯವನ್ನು ನೆನಪಿಸಿಕೊಂಡಿದ್ದಾರೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಭಾರತ ತಂಡದ ಕ್ರಿಕೆಟ್‌ ಆಟಗಾರ ರಿಂಕು ಸಿಂಗ್–ಸಂಸದೆ ಪ್ರಿಯಾ ಸರೋಜ ಮದುವೆಗೆ ಮುಹೂರ್ತ ಫಿಕ್ಸ್

ನಿಮ್ಮ ಕಾಮೆಂಟ್ ಬರೆಯಿರಿ

advertisement