ಬೆಂಗಳೂರು: ಬಸವ ಜಯಂತಿಯ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಮ ನಗರದಲ್ಲಿರುವ ತಮ್ಮ ಕೃಷಿ ಭೂಮಿಗೆ ನಾಲ್ಕು ವಿವಿಧ ತಳಿಯ ಹಸುಗಳನ್ನ ಬರಮಾಡಿಕೊಂಡಿದ್ದಾರೆ. ಈ ಬಗ್ಗೆ ಎಚ್.ಡಿ.ಕುಮಾರಸ್ವಾಮಿಯವರೇ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.
ರಾಜಕೀಯ ಮತ್ತು ಕೃಷಿ ದೃಷ್ಟಿಯಿಂದ ರಾಮನಗರ ನನ್ನ ಕರ್ಮಭೂಮಿ. ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯ ನನ್ನ ‘ಕೃಷಿ ಭೂಮಿ’ಗೆ ಬಸವಜಯಂತಿಯ ಈ ಶುಭದಿನದಂದು ಕಪಿಲ, ಸ್ವರ್ಣಕಪಿಲ, ಗಿರ್ ತಳಿಯ ನಾಲ್ಕು ಗೋವುಗಳನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಹಸುಗಳನ್ನು ನನ್ನ ಕುಟುಂಬ ಭಕ್ತಿಪೂರ್ವಕವಾಗಿ ಪೂಜಿಸಿದ ಸಂಭ್ರಮದ ಕ್ಷಣಗಳಿವು ಎಂದು ಟ್ವೀಟ್ನಲ್ಲಿ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಫೋಟೋಗಳಲ್ಲಿ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸೊಸೆ ರೇವತಿ ನಿಖಿಲ್ ಇದ್ದಾರೆ. ರೇವತಿ ನಿಖಿಲ್ ಗೋವುಗಳಿಗೆ ಪೂಜೆ ಮಾಡಿ ಫಲವನ್ನ ತಿನ್ನಲು ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ