ಕೋಲಾರ: ಸಾಮಾನ್ಯವಾಗಿ ಅಕ್ಕ ತಂಗಿ ಇಬ್ಬರನ್ನೂ ಒಂದೇ ಮುಹೂರ್ತದಲ್ಲಿ ವರನೊಬ್ಬ ಮದುವೆಯಾಗುವುದು ಇತ್ತೀಚಿಗೆ ನಡೆಯುತ್ತಿಲ್ಲ. ಒಂದು ಕಾನೂನಿನ ಕಟ್ಟಳೆ ಹಾಗೂ ಮತ್ತೊಂದು ಹುಡುಗಿಯರೇ ಇಂಥದ್ದಕ್ಕೆ ಈಗ ಒಪ್ಪುವುದಿಲ್ಲ. ಆದರೆ ಎಲ್ಲರಿಗೂ ಅಚ್ಚರಿ ಎನ್ನುವಂತೆ ಇಂಥದ್ದೊಂದು ಮದುವೆ ನಡೆದಿದೆ ಎಂದು ವರದಿಯಾಗಿದೆ.ಮದುವೆ ಭಾವಚಿತ್ರ ಹಾಗೂ ಲಗ್ನಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
ಇದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ನಡೆದಿದೆ. ಸುಪ್ರಿಯಾ ಮತ್ತು ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಎನ್ನುವವರು ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಲಾರದ ಕುರುಡುಮಲೆ ದೇಗುಲದಲ್ಲಿ ಮದುವೆ ನಡೆದಿದ್ದು, ಮೇ ತಿಂಗಳ 7ರಂದು ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಆರತಕ್ಷತೆಯು ನೆರವೇರಿದೆ. ಇದನ್ನು ನ್ಯೂಸ್ 18 ಕನ್ನಡ.ಕಾಮ್ ವರದಿ ಮಾಡಿದೆ.
ವರದಿ ಪ್ರಕಾರ, ಉಮಾಪತಿ ಅಕ್ಕ ತಂಗಿಯರನ್ನು ಮದುವೆಯಾಗಲು ಕಾರಣವಿದೆಯಂತೆ. ಯಾಕೆಂದರೆ ಅಕ್ಕತಂಗಿಯರಲ್ಲಿ ಉಮಾಪತಿ ಅಕ್ಕ ಸುಪ್ರಿಯಾ ಅವರಿಗೆಮಾತು ಬರುವುದಿಲ್ಲವಂತೆ. ಮಾತು ಬಾರದ ಕಾರಣ ಸುಪ್ರಿಯಾ ಅವರನ್ನು ಮದುವೆಯಾಗುವುದು ಕಷ್ಟಸಾಧ್ಯ ಎಂಬ ಕಾರಣಕ್ಕೆ ಜೊತೆಗೆ ತಂಗಿಯೊಂದಿಗೆ ಅಕ್ಕನನ್ನೂ ಮದುವೆಯಾಗು ಎಂದು ಪೋಷಕರು ಹೇಳಿದ್ದಕ್ಕೆ ಸಂಬಂಧಿಯಾಗಿರುವ ವರ ಉಮಾಪತಿ ಒಪ್ಪಿಗೆ ಸೂಚಿಸಿದ್ದಾರೆ. ಸ್ವಂತ ಅಕ್ಕನ ಅಕ್ಕನ ಮಕ್ಕಳನ್ನೇ ಉಮಾಪತಿ ಮದುವೆಯಾಗಿದ್ದಾರೆ. ಅಕ್ಕ-ತಂಗಿಯರ ಒಪ್ಪಿಗೆ ಪಡೆದೇ ಈ ಮದುವೆ ನಡೆದಿದೆಯಂತೆ.
ಮದುವೆ ಹಾಗೂ ಲಗ್ನಪತ್ರಿಕೆ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾತು ಬಾರದ ಯುವತಿಗೆ ಬಾಳು ನೀಡಿದ್ದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ. ಸಾಕಷ್ಟು ಮಂದಿ ಇದಕ್ಕೆ ಅಚ್ಚರಿ ವ್ಯಕ್ತ ಪಡಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ