ಕುಸ್ತಿಪಟು ಹತ್ಯೆ ಪ್ರಕರಣ:ಹತ್ಯೆ ಪ್ರಕರಣ: ಒಲಿಂಪಿಕ್ ಕುಸ್ತಿಪಟು ಸುಶೀಲಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್

ನವ ದೆಹಲಿ: ಕೊಲೆ ಆರೋಪದ ಸಂಬಂಧ ಪ್ರಕರಣ ದಾಖಲಾದ ಮೇಲೆ ಪರಾರಿಯಾಗಿರುವ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ.
ಸುಶೀಲಕುಮಾರ್ ಅವರ ಮೇಲೆ ಛತ್ರಸಾಲ್‌ ಕ್ರೀಡಾಂಗಣದ ಹೊರಗೆ ನಡೆದ ಜಗಳಲ್ಲಿ 24 ವರ್ಷದ ಯುವ ಕುಸ್ತಿಪಟು ಸಾಗರ್ ಧಂಕಡ್ ಅವರ ಕೊಲೆ ಮಾಡಿಚ ಪ್ರಕರಣದಲ್ಲಿ ಆರೋಪವಿದೆ. ಈ ಪ್ರಕರಣದಲ್ಲಿ ತಮ್ಮ ಮೇಲೆ ಎಫ್‌ಐಆರ್‌ ದಾಖಲಾಗುತ್ತಿದ್ದಂತೆಯೇ ಸುಶೀಲ ಕುಮಾರ ಪರಾರಿಯಾಗಿದ್ದಾರೆ. ಈ ಹಿಂದೆ, ಸುಶೀಲ್ ಮತ್ತು ಅವರ ಶಿಷ್ಯರ ವಿರುದ್ಧ ಲುಕ್ ಔಟ್ ನೋಟಿಸ್ ನೀಡಲಾಗಿತ್ತು.
ಸಾಗರ್ ಗ್ರೀಕೊ ರೋಮನ್ ಕುಸ್ತಿಪಟು, ಎಂಟು ವರ್ಷಗಳಿಂದ ಹತ್ರಾಸಲ್‌ನಲ್ಲಿ ತರಬೇತಿ ಪಡೆಯುತ್ತಿದ್ದರು. ಅವರ ತಂದೆ ಅಶೋಕ್ ಕುಮಾರ್ ದೆಹಲಿ ಪೊಲೀಸ್​ ವಿಭಾಗದಲ್ಲಿ ಕಾನ್‌ಸ್ಟೇಬಲ್‌ ಆಗಿದ್ದು, ಅವರನ್ನು ರೋಹಿಣಿ ಜಿಲ್ಲೆಯಲ್ಲಿ ನೇಮಿಸಲಾಗಿದೆ. ಅಪರಾಧದಲ್ಲಿ ಸುಶೀಲ್ ಹೆಸರು ಕೇಳಿಬಂದ ನಂತರ ಸುಶೀಲ್ ತನ್ನ ತಂಡದ ಸದಸ್ಯರೊಂದಿಗೆ ಪರಾರಿಯಾಗಿದ್ದಾನೆ. ಪೊಲೀಸರು ಪಂಜಾಬ್, ದೆಹಲಿ ಮತ್ತು ಹರಿಯಾಣದ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದರು, ಆದರೆ ಏನೂ ಪ್ರಯೋಜನವಾಗಿಲ್ಲ. ಇದರ ನಂತರವೇ ದೆಹಲಿ ಪೊಲೀಸರು ಆತನ ವಿರುದ್ಧ ಲುಕ್‌ ಔಟ್ ನೋಟಿಸ್ ನೀಡಿದ್ದರು. ಈಗ ಸುಶೀಲ ವರಿದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಲಾಗಿದೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement