ಅಂತ್ಯಕ್ರಿಯೆಗೆ ಕೆಲವೇ ನಿಮಿಷಗಳ ಮೊದಲು ಎಚ್ಚರಗೊಂಡ ಕೋವಿಡ್ ಪಾಸಿಟಿವ್ ಮಹಿಳೆ..!

ಪುಣೆ: ಇದೊಂದು ವಿಲಕ್ಷಣ ಘಟನೆ. ಈ ಘಟನೆಗೆ ಮನೆಯವರೇ ಹೌಹಾರಿದ್ದಾರೆ..ಜೊತೆಗೆ ಸಂತೋಷವೂ ಆಗಿದೆ.
ಈ ವಿಲಕ್ಷಣ ಘಟನೆ  ಸಮೀಪದ ಬಾರಾಮತಿ ತಾಲೂಕು ಮುಧಲೆ ಗ್ರಾಮದಲ್ಲಿ ನಡೆದಿದೆ. 76 ವರ್ಷದ ಮಹಿಳೆ ಮೃತಪಟ್ಟಿದ್ದಾಳೆಂದು ನಂಬಲಾಗಿದೆ.
ಶಕುಂತಲಾ ಗಾಯಕವಾಡ ಎಂಬ ಮಹಿಳೆ ಕೆಲವು ದಿನಗಳ ಹಿಂದೆ ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು. ಅವರು ಮನೆ ಪ್ರತ್ಯೇಕಯಲ್ಲಿಯೇ (ಹೋಮ್‌ ಐಸೋಲೇಶನ್‌) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವೃದ್ಧಾಪ್ಯದಿಂದಾಗಿ ಆಕೆಯ ಸ್ಥಿತಿ ಹದಗೆಟ್ಟಿತು, ಅದರ ನಂತರ ಕುಟುಂಬವು ಅವಳನ್ನು ಬಾರಾಮತಿಯ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿತು.
ಮೇ 10 ರಂದು ವೃದ್ಧ ಮಹಿಳೆಯನ್ನು ಖಾಸಗಿ ವಾಹನದಲ್ಲಿ ಬಾರಾಮತಿಗೆ ಕರೆದೊಯ್ಯಲಾಯಿತು. ಕುಟುಂಬವು ಬಾರಾಮತಿಯಲ್ಲಿ ಆಸ್ಪತ್ರೆಯ ಹಾಸಿಗೆಯನ್ನು ಖಾತ್ರಿ ಪಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರು ಕಾರಿನಲ್ಲಿ ಕಾಯುತ್ತಿದ್ದಾಗ ಮಹಿಳೆ ಪ್ರಜ್ಞೆ ತಪ್ಪಿದರು. ಶರೀರರವು ಚಲನೆಯನ್ನು ನಿಲ್ಲಿಸಿತು. ಮಹಿಳೆ ಮೃತಪಟ್ಟಿದ್ದಾಳೆ ಎಂದು ಕುಟುಂಬದವರು ತಮ್ಮ ಸಂಬಂಧಿಕರಿಗೆ ಕೊನೆಯ ವಿಧಿ-ವಿಧಾನಗಳ ಸಲುವಾಗಿ ಮಾಹಿತಿ ನೀಡಿದರು.
ಕುಟುಂಬವು ಈ ವೃದ್ಧೆಯನ್ನು ಮನೆಗೆ ಕರೆದುಕೊಂಡು ಹೋಗಿ ಶವ ಸಂಸ್ಕಾರಕ್ಕೆ ಸಿದ್ಧತೆ ಆರಂಭಿಸಿತು. ಸಂಬಂಧಿಕರು ಶೋಕಿಸುತ್ತಿದ್ದರು. ಶೋಕದ ಮಧ್ಯೆಯೇ ಮಹಿಳೆಯನ್ನು ತನ್ನ ಅಂತಿಮ ಪ್ರಯಾಣಕ್ಕಾಗಿ ಅವಳನ್ನು ಚಟ್ಟದ ಮೇಲೆ ಇರಿಸಲಾಯಿತು.
ಆಗ ಇದ್ದಕ್ಕಿದ್ದಂತೆ ಮಹಿಳೆ ಅಳಲು ಪ್ರಾರಂಭಿಸಿದಳು ಮತ್ತು ನಂತರ ಕಣ್ಣು ತೆರೆದಳು. ಆಘಾತಕ್ಕೊಳಗಾದ ಆಕೆಯ ಕುಟುಂಬದವರು ತಕ್ಷಣವೇ ಆಕೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು.
ಬಾರಾಮತಿಯ ಮುಧಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಸಂತೋಷ್ ಗಾಯಕವಾಡ ಖಚಿತಪಡಿಸಿದ್ದಾರೆ.
ಏತನ್ಮಧ್ಯೆ, ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಬಾರಾಮತಿಯ ಸಿಲ್ವರ್ ಜುಬಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಲ್ವರ್ ಜುಬಿಲಿ ಆಸ್ಪತ್ರೆಯ ಸಂಸ್ಥಾಪಕ ಡಾ.ಸದಾನಂದ್ ಕೇಲ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತ ತಂಡದ ಕ್ರಿಕೆಟ್‌ ಆಟಗಾರ ರಿಂಕು ಸಿಂಗ್–ಸಂಸದೆ ಪ್ರಿಯಾ ಸರೋಜ ಮದುವೆಗೆ ಮುಹೂರ್ತ ಫಿಕ್ಸ್

4.2 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement