ಬಸವಜಯಂತಿಯಂದು ನಾಲ್ಕು ದೇಸಿ ತಳಿ ಹಸು ಬರಮಾಡಿಕೊಂಡ ಎಚ್‌ಡಿಕೆ ಕುಟುಂಬ

ಬೆಂಗಳೂರು: ಬಸವ ಜಯಂತಿಯ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅವರು ರಾಮ ನಗರದಲ್ಲಿರುವ ತಮ್ಮ ಕೃಷಿ ಭೂಮಿಗೆ ನಾಲ್ಕು ವಿವಿಧ ತಳಿಯ ಹಸುಗಳನ್ನ ಬರಮಾಡಿಕೊಂಡಿದ್ದಾರೆ. ಈ ಬಗ್ಗೆ ಎಚ್‌.ಡಿ.ಕುಮಾರಸ್ವಾಮಿಯವರೇ ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ.
ರಾಜಕೀಯ ಮತ್ತು ಕೃಷಿ ದೃಷ್ಟಿಯಿಂದ ರಾಮನಗರ ನನ್ನ ಕರ್ಮಭೂಮಿ. ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯ ನನ್ನ ‘ಕೃಷಿ ಭೂಮಿ’ಗೆ ಬಸವಜಯಂತಿಯ ಈ ಶುಭದಿನದಂದು ಕಪಿಲ, ಸ್ವರ್ಣಕಪಿಲ, ಗಿರ್ ತಳಿಯ ನಾಲ್ಕು ಗೋವುಗಳನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಹಸುಗಳನ್ನು ನನ್ನ ಕುಟುಂಬ ಭಕ್ತಿಪೂರ್ವಕವಾಗಿ ಪೂಜಿಸಿದ ಸಂಭ್ರಮದ ಕ್ಷಣಗಳಿವು ಎಂದು ಟ್ವೀಟ್‌ನಲ್ಲಿ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಫೋಟೋಗಳಲ್ಲಿ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್​ ಕುಮಾರಸ್ವಾಮಿ ಹಾಗೂ ಸೊಸೆ ರೇವತಿ ನಿಖಿಲ್​​ ಇದ್ದಾರೆ. ರೇವತಿ ನಿಖಿಲ್​​ ಗೋವುಗಳಿಗೆ ಪೂಜೆ ಮಾಡಿ ಫಲವನ್ನ ತಿನ್ನಲು ನೀಡಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement