
ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಸುಪ್ರಿಯಾ ಹಾಗೂ ಲಲಿತ ಎಂಬ ಅಕ್ಕ ತಂಗಿಯರನ್ನುಒಂದೇ ಮುಹೂರ್ತದಲ್ಲಿ ಮದುವೆಯಾಗಿದ್ದ ಉಮಾಪತಿ ಎಂಬುವವರ ನಂತರ ಈಗ ಹೊಸ ಟ್ವಿಸ್ಟ್ ಆಗಿದೆ. ವಿವಾಹ ಆದ ಕೆಲವೇ ದಿನಗಳಲ್ಲಿ ಉಪಮಾತಿ ಅವರ ಅರೆಸ್ಟ್ ಆಗಿದೆ.
ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಹೀಗಾಗಿ ಅಕ್ಕನಿಗೆ ಎಲ್ಲಿ ಮದುವೆಯಾಗುವುದಿಲ್ಲವೋ ಎಂದು ಯೋಚಿಸಿದ ತಂಗಿ ಲಲಿತಾ ನನ್ನನ್ನು ಮದುಯಾಗಬೇಕೆಂದರೆ ತಮ್ಮ ಅಕ್ಕನನ್ನೂ ಮದುವೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವರ ಉಮಾಪತಿಗೆ ವಿಧಿಸಿದ್ದರು. ಅದಕ್ಕೆ ಒಪ್ಪಿದ ಅವರು ಮೇ 7ರಂದು ಗ್ರಾಮದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಹೋದರಿಯರನ್ನು ಮದುವೆ ಮಾಡಿಕೊಂಡಿದ್ದರು.
ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಆದರೆ, ಮದುವೆಯಾದ ಹುಡುಗಿಯರ ಪೈಕಿ ಒಬ್ಬರು ಅಪ್ರಾಪ್ತೆಯಂತೆ ಕಂಡು ಬಂದಿದ್ದರು. ಹೀಗಾಗಿ ಈ ಬಗ್ಗೆ ಪರಿಶೀಲನೆ ಮಾಡಲುಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಆದೇಶಿಸಿದ್ದರು. ಪರಿಶೀಲನೆ ನಡೆಸಿದಾಗ ಲಲಿತಾ ಅಪ್ರಾಪ್ತೆ ಎನ್ನುವ ವಿಚಾರ ತಿಳಿದು ಬಂದಿದೆ.
ಅಪ್ರಾಪ್ತೆ ಮದುವೆ ಆಗುವುದು ಕಾನೂನು ಪ್ರಕಾರ ಅಪರಾಧ. ಬಾಲ್ಯವಿವಾಹದ ಕಾರಣಕ್ಕೆ ಉಮಾಪತಿ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಉಪಮಾತಿಯನ್ನು ಬಂಧಿಸಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ