ಉತ್ತರ ಪ್ರದೇಶ: ಗಂಗಾನದಿ ತೀರದ ಮರಳಿನಲ್ಲಿ ಹೂತ ನೂರಾರು ಶವಗಳು ಪತ್ತೆ..!

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯಲ್ಲಿನ ಗಂಗಾ ನದಿ ತೀರದ ಮರಳಿನಲ್ಲಿ ಹೂತಿರುವ ಬುತೇಕ
ಶವಗಳು ಪತ್ತೆಯಾಗಿವೆ.
ಸಂಗಮ ಪ್ರದೇಶದಲ್ಲಿ ಮರಳಿನಲ್ಲಿ ಹೂತಿರುವ ಕೊಳೆತ ನೂರಾರು ಮೃತದೇಹಗಳು ಕಾಣಿಸುತ್ತಿವೆ. ಕಳೆದ ಎರಡ್ಮೂರು ತಿಂಗಳುಗಳಿಂದ ಜನರು ಮೃತದೇಹಗಳನ್ನು ಇಲ್ಲಿಯೇ ಹೂಳುತ್ತಿದ್ದಾರೆ. ಬಿರುಗಾಳಿ ಬಂದಾಗ ಮರಳಿನಿಂದ ಮುಚ್ಚಿದ ಮೃತದೇಹಗಳ ಮೇಲಿನ ಮರಳು ಹಾರಿ ಹೋಗುತ್ತಿದ್ದು, ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಕಾಣುತ್ತಿವೆ. ಹದ್ದು, ನಾಯಿ, ಪಕ್ಷಿಗಳು ಅವುಗಳನ್ನು ತಿನ್ನುತ್ತಿವೆ.
ಈ ಸಾಂಕ್ರಾಮಿಕದ ಅವಧಿಯಲ್ಲಿ ಪರಿಸ್ಥಿತಿ ಕೆಟ್ಟದಾಗಿದ್ದು, ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಸರ್ಕಾರ ಎಚ್ಚರಿಕೆ ವಹಿಸಬೇಕು. ಜನರು ಅಸಹಾಯಕರಾಗಿದ್ದಾರೆ.ಅನೇಕ ಜನರು ಬಡವರಾಗಿದ್ದು, ಅವರು ಸೂಕ್ತ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಲು ಸಂಪನ್ಮೂಲದ ಕೊರತೆಯಿದೆ. ಸರ್ಕಾರ ಈ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಈ ಸಮಸ್ಯೆ ಬಗೆಹರಿಸುವಂತೆ ಪದೇ ಪದೇ ಜಿಲ್ಲಾ ಅಧಿಕಾರಿಗಳಿಗೆ ದೂರು ನೀಡಿದ್ದರೂ , ಯಾವುದೇ ಪ್ರಯೋಜನವಾಗುತ್ತಿಲ್ಲ. ಪವಿತ್ರ ಗಂಗಾ ನದಿ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಕೆಟ್ಟ ವಾಸನೆಯಿಂದ ಭಕ್ತರು ಗಂಗೆಯಲ್ಲಿ ಸ್ನಾನ ಮಾಡುವುದನ್ನು ನಿಲ್ಲಿಸಿದ್ದಾರೆ. ಕನಿಷ್ಠ 400ರಿಂದ 500 ಮೃತದೇಹಗಳನ್ನು ಇಲ್ಲಿ ಹೂಳಲಾಗಿದೆ. ಸರ್ಕಾರ ಈ ವಿಚಾರದ ಬಗ್ಗೆ ಎಚ್ಚರ ವಹಿಸಬೇಕು ಎಂದು ಸ್ಥಳೀಯರು ಹೇಳಿದ್ದಾರೆ.
ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲೂ ಇಂತಹದ್ದೇ ಚಿತ್ರಣ ಕಂಡುಬರುತ್ತಿದೆ. ಕಳೆದ ವಾರ ಗಾಜಿಪುರ್ ಮತ್ತು ಬಿಹಾರದ ಬುಕ್ಸಾರ್ ನಲ್ಲಿಯೂ ನದಿ ತೀರದಲ್ಲಿ ಮೃತದೇಹಗಳು ತೇಲುತ್ತಿದದ್ದು ಕಂಡುಬಂದಿತ್ತು ಅವುಗಳನ್ನು ಬೀದಿ ನಾಯಿಗಳು ಎಳೆದು ತಂದಿದ್ದವು. ಈ ಮೃತದೇಹಗಳು ಪ್ರಯಾಗ್ ರಾಜ್ ನಲ್ಲಿ ಕೋವಿಡ್-19 ರೋಗಿಗಳದ್ದು ಎಂಬ ಶಂಕೆಯು ವ್ಯಕ್ತವಾಗಿದೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement