ಟಗ್ ಬೋಟ್‌ ದುರಂತ: ನೌಕಾದಳದಿಂದ 9 ಸಿಬ್ಬಂದಿ ರಕ್ಷಣೆ

ಮಂಗಳೂರು:ಕಾಪು‌ಲೈಟ್ ಹೌಸ್ ಗಿಂತ 15 ಕಿ.ಮೀ ದೂರದಲ್ಲಿ ಬಂಡೆಗೆ ಸಿಲುಕಿ ಅಪಘಾತಕ್ಕೀಡಾದ ಕೋರಮಂಡಲ ಎಕ್ಸ್‌ಪ್ರೆಸ್‌ ಪ್ರೆಸ್ ವೆಸೆಲ್ ಟಗ್ ನಲ್ಲಿ‌ ಸಿಲುಕಿರುವ 9 ಮಂದಿ ಸಿಬ್ಬಂದಿ ರಕ್ಷಣೆ ಮಾಡಲಾಗಿದೆ.
ಸೋಮವಾರ ಬೆಳಗ್ಗೆ ನೌಕಾಪಡಯ ಹೆಲಿಕಾಪ್ಟರ್ ಮೂಲಕ ಎಲ್ಲರನ್ನೂ ಏರ್ ಲಿಫ್ಟ್ ಮಾಡಿ, ಕೋಸ್ಟ್ ಗಾರ್ಡ್ ನ ವರಾಹ ನೌಕೆಯ ಮೂಲಕ ದಡಕ್ಕೆ ಕರೆತರಲಾಗುತ್ತಿದೆ. ಸದ್ಯ ಎಲ್ಲ ಒಂಬತ್ತು ಮಂದಿ ಕಾರ್ಮಿಕರನ್ನು ಎನ್ಎಂಪಿಟಿ ಬಂದರಿಗೆ ಕರೆತರಲಾಗುತ್ತಿದೆ. ಕಾರ್ಮಿಕರ ಆರೋಗ್ಯದ ತಪಾಸಣೆಗೆ ವೈದ್ಯರ ತಂಡ ಸಜ್ಜಾಗಿದೆ.
ಎಂಆರ್ ಪಿಎಲ್ ಕಚ್ಚಾ ತೈಲ ಹಡಗಿನ ಪೈಪ್ ಲೈನ್ ನಿರ್ವಹಣೆ ಮಾಡುತ್ತಿದ್ದ ಟಗ್ ಬೋಟ್, ಮಂಗಳೂರು ಹೊರವಲಯದ ಸುರತ್ಕಲ್ ನಿಂದ 17 ನಾಟಿಕಲ್ ಮೈಲಿ ದೂರದಲ್ಲಿ ಮಗುಚಿಬಿದ್ದಿತ್ತು. ಮಂಗಳೂರಿನ ತೈಲ ಶುದ್ಧೀಕರಣ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟಗ್ ಬೋಟ್ ಇದಾಗಿದ್ದು, ಎಂಆರ್ ಪಿಎಲ್ ಗೆ ತೈಲ ತರುವ ಹಡಗಿಗೆ ಆಳ ಸಮುದ್ರದಲ್ಲಿ ಪೈಪ್ ಜೋಡಿಸುವ ಕಾರ್ಯ ಮಾಡುತ್ತಿತ್ತು. ತೌಕ್ಟೆ ಚಂಡಮಾರುತದ ಅಬ್ಬರಕ್ಕೆ ಸಮುದ್ರದಲ್ಲಿ ಉಂಟಾದ ಬೃಹತ್‌ ಅಲೆಗಳ ಹೊಡೆತಕ್ಕೆ ಸಿಲುಕಿ ಎನ್‌ಎಂಪಿಟಿ ಬೋಟ್ ಸಮುದ್ರದಲ್ಲಿ ಮುಗುಚಿ ದುರಂತಕ್ಕೀಡಾಗಿತ್ತು. ಬೋಟ್ ನಲ್ಲಿದ್ದ ಇಬ್ಬರು ಈಜಿ ದಡ ಸೇರಿದ್ದರು. ಓರ್ವ ಮೃತಪಟ್ಟದ್ದರು.ಈಗ ಅದರಲ್ಲಿ ಉಳಿದಿದ್ದ ಒಂಬತ್ತು ಮಂದಿ ಸಿಬ್ಬಂದಿ ರಕ್ಷಣೆ ಮಾಡಲಾಗಿದೆ.ಟಗ್ ನಲ್ಲಿ ಇರುವ 9 ಮಂದಿ ಸಿಬಂದಿ ಸುಮಾರು 44 ಗಂಟೆಗಳನ್ನು‌ ಈಗಾಗಲೇ ಸಮುದ್ರ ಮಧ್ಯದಲ್ಲಿ ಕಳೆದಿದ್ದಾರೆ

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement