ವೈರಲ್ ವಿಡಿಯೋ.. ಮಂಗ ಮನುಷ್ಯರಂತೆ ಬಟ್ಟೆ ಒಗೆಯುವುದಕ್ಕೆ ನೀವು ಕ್ಲೀನ್‌ ಬೌಲ್ಡ್‌ ಆಗುತ್ತೀರಿ…!

ಪ್ರಾಣಿಗಳ ವಿಡಿಯೊಗಳನ್ನು ಯಾರು ಇಷ್ಟಪಡುವುದಿಲ್ಲ? ಸಿಲ್ಲಿ ಮತ್ತು ಅವಿವೇಕದ ಕೆಲಸಗಳನ್ನು ಮಾಡುವ ಪ್ರಾಣಿಗಳ ತಮಾಷೆಯ ತುಣುಕುಗಳನ್ನು ನೋಡುವುದು ನಿಸ್ಸಂದೇಹವಾಗಿ ನಮ್ಮ ಮನಸ್ಥಿತಿ ಬೆಳಗಿಸುತ್ತದೆ ಮತ್ತು ಅಂತಹ ವಿಡಿಯೊಗಳು ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ.
ಮನುಷ್ಯರಂತೆ ಬಟ್ಟೆಗಳನ್ನುತೊಳೆಯುವ ಮಂಗನ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿದೆ. ಕೋತಿಗಳು ಮಾನವ ನಡವಳಿಕೆಯನ್ನು ಅನುಕರಿಸುವಲ್ಲಿ ಹೆಸರುವಾಸಿಯಾಗಿದೆ ಮತ್ತು ಈ ವಿಡಿಯೋ ನಿಮ್ಮನ್ನು ಕ್ಲೀನ್‌ ಬೌಲ್ಡ್‌ ಮಾಡುತ್ತದೆ !
ವಿಡಿಯೊದಲ್ಲಿ, ಕೋತಿಯು ವಿಶಿಷ್ಟವಾದ ‘ದೇಸಿ ಶೈಲಿಯಲ್ಲಿ’ ಬಟ್ಟೆ ಒಗೆಯುವುದನ್ನು ಕಾಣಬಹುದು. ಕೋತಿ ಮೊದಲು ಬಟ್ಟೆಯನ್ನು ಹಲವಾರು ಬಾರಿ ಬಡಿದು, ಉಜ್ಜಿ ನಂತರ ಬಟ್ಟೆಯನ್ನು ನೀರಿನಲ್ಲಿ ಮುಳುಗಿಸುತ್ತದೆ. ನಂತರ ಬ್ರಶ್‌ ತೆಗೆದುಕೊಂಡು ಬಟ್ಟೆಯ ಮೇಲೆ ಉಜ್ಜಿ ಎಲ್ಲಾ ಕೊಳೆಗಳನ್ನು ತೆಗೆದುಹಾಕುತ್ತದೆ.

ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೊವನ್ನು ಇಲ್ಲಿ ನೋಡಿ 

ಈ ವಿಡಿಯೊ ವೈರಲ್ ಆಗಿದೆ, ಮತ್ತು ಹಾಕಿದ ಕೆಲವೇ ತಾಸುಗಳಲ್ಲಿ ಇಲ್ಲಿಯವರೆಗೆ 96,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಸಾಕಷ್ಟು ಕಾಮೆಂಟ್‌ಗಳೂ ಬಂದಿವೆ. ಕೆಲವರು ಕೋತಿ ಕೆಲಸ ಮಾಡುವುದು ಪ್ರಾಣಿಗಳ ಕಿರುಕುಳಕ್ಕೆ ಸಮನಾಗಿರುತ್ತದೆ ಎಂದು ಹೇಳಿದ್ದಾರೆ. ಮತ್ತೆ ಹಲವರು ಈ ಮಂಗ ಮಾನವರು ಈ ರೀತಿ ಬಟ್ಟೆ ಒಗೆಯುವುದನ್ನು ನೋಡಿರಬಹುದು ಮತ್ತು ಅದಕ್ಕಾಗಿಯೇ ಅದನ್ನು ನಕಲು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೋತಿಗಳು ಸ್ಮಾರ್ಟೆಸ್ಟ್ ಪ್ರಾಣಿಗಳಲ್ಲಿ ಒಂದಾಗಿದೆ ಮತ್ತು ಅವುಗಳು ನಮ್ಮನ್ನು ಗಮನಿಸುವುದರ ಮೂಲಕ ಅನೇಕ ಮಾನವ ಚಟುವಟಿಕೆಗಳನ್ನು ಕಲಿಯುತ್ತದೆ ಎಂದು ಕೆಲವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement