ಕರ್ನಾಟಕದಲ್ಲಿ ಮಂಗಳವಾರ ದೈನಂದಿನ ಕೊರೊನಾ ಸೋಂಕಿಗಿಂತ ಎರಡುಪಟ್ಟುಗುಣಮುಖ..!

ಬೆಂಗಳೂರು:ಕರ್ನಾಟಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ (ಮಂಗಳವಾರ) ದೈನಂದಿನ ಹೊಸ ಪ್ರಕರಣಗಳು ದಾಖಲಾಗಿದ್ದಕ್ಕಿಂತ ಸುಮಾರು ಎರಡುಪಟ್ಟು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ..!
ರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 30,309 ಜನರಿಗೆ ಹೊಸ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಅವಧಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರ ಸಂಖ್ಯೆ ಬರೋಬ್ಬರಿ 58, 395.
ಮಂಗಳವಾರ ತುಸು ಹೆಚ್ಚು ಅಂದರೆ 525 ಜನರು ಕೊರೊನಾ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮಹಾಮಾರಿ ಸೋಂಕಿಗೆ ಇದುವರೆಗೆ 22838 ಜನರು ಸಾವಿಗೀಡಾಗಿದ್ದಾರೆ.ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 22,72,374ಕ್ಕೆ ಏರಿಕೆಯಾಗಿದೆ. ಒಟ್ಟು 5,75,028 ಸಕ್ರಿಯ ಪ್ರಕರಣಗಳಿವೆ. ಒಟ್ಟು 16,74,487 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ 8676 ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ. 298 ಜನ ಮೃತಪಟ್ಟಿದ್ದು, 31,795 ಜನ ಬಿಡುಗಡೆಯಾಗಿದ್ದಾರೆ.ಒಟ್ಟು 3,40,965 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-295, ಬಳ್ಳಾರಿ-1799, ಬೆಳಗಾವಿ-2118, ಬೆಂಗಳೂರು ಗ್ರಾಮಾಂತರ-1339, ಬೆಂಗಳೂರು ನಗರ-8676, ಬೀದರ್-113, ಚಾಮರಾಜನಗರ-345, ಚಿಕ್ಕಬಳ್ಳಾಪುರ-339, ಚಿಕ್ಕಮಗಳೂರು-401, ಚಿತ್ರದುರ್ಗ-436, ದಕ್ಷಿಣ ಕನ್ನಡ-777, ದಾವಣಗೆರೆ-594, ಧಾರವಾಡ-969, ಗದಗ-543, ಹಾಸನ-834, ಹಾವೇರಿ-187, ಕಲಬುರಗಿ-548, ಕೊಡಗು-161, ಕೋಲಾರ-1021, ಕೊಪ್ಪಳ-523, ಮಂಡ್ಯ-606, ಮೈಸೂರು-1916, ರಾಯಚೂರು-493, ರಾಮನಗರ-427, ಶಿವಮೊಗ್ಗ-1168, ತುಮಕೂರು-1562, ಉಡುಪಿ-737, ಉತ್ತರ ಕನ್ನಡ-803, ವಿಜಯಪುರ-262, ಯಾದಗಿರಿ-317.
ಜಿಲ್ಲಾವಾರು ಸಂಪೂರ್ಣ ವಿವರಗಳನ್ನು ಕೆಳಗೆ ಪಿಡಿಎಫ್‌ನಲ್ಲಿ ಕೊಡಲಾಗಿದೆ.

ಪ್ರಮುಖ ಸುದ್ದಿ :-   ಭಾರಿ ಮಳೆ : ಉತ್ತರ ಕನ್ನಡ ಜಿಲ್ಲೆ 4 ತಾಲೂಕುಗಳ ಶಾಲೆಗಳಿಗೆ ನಾಳೆ (ಜುಲೈ 4)ರಜೆ ಘೋಷಣೆ

18-05-2021 HMB Kannada

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement