ಹುಬ್ಬಳ್ಳಿ:ಕೊರೋನಾ ವೈರಸ್ ಬಂದಿದ್ದೇ ಚೀನಾದಿಂದ ಚೀನಾದಲ್ಲಿ. ಆದರೆ ಕಾಂಗ್ರೆಸ್ ನಾಯಕರಾಗಲಿ, ಎಡಪಕ್ಷದವರಾಗಲಿ ಅದನ್ನು ಚೀನಾ ವೈರಸ್ ಎನ್ನಲಿಲ್ಲ. ಬದಲಿಗೆ ಮೋದಿ ವೈರಸ್ ಎಂದು ಬಿಂಬಿಸಲು ಹೊರಟಿದ್ದಾರೆ. ಪ್ರಧಾನಿ ಮೋದಿ ತೇಜೋವಧೆ ಮಾಡುವ ತರಾತುರಿಯಲ್ಲಿ ಕಾಂಗ್ರೆಸ್ ನಾಯಕರು ದೇಶಕ್ಕೇ ಅಪಮಾನ ಮಾಡುತ್ತಿದ್ದಾರೆ. ಭಾರತದ ಮಾನ ಮರ್ಯಾದೆ ಹರಾಜಾದರೂ ತೊಂದರೆಯಿಲ್ಲ, ಮೋದಿಗೆ ಡ್ಯಾಮೇಜ್ ಆದರೆ ಸಾಕು ಎಂಬ ಮನೋಭಾದಲ್ಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಮಾತನಾಡಿದ ಅವರು ಕಾಂಗ್ರೆಸ್ಇಂತಹ ಕೆಳಮಟ್ಟದ ರಾಜಕಾರಣ ಮಾಡಬಾರದು ಇದು ಕಾಂಗ್ರೆಸ್ ಕ್ಷುಲ್ಲಕ ಮನೋಭಾವವನ್ನು ಸಾರ್ವಜನಿಕವಾಗಿ ತೋರಿಸುತ್ತದೆ ಎಂದು ಇಂಥ ಮನೋಸ್ಥಿತಿಯಿಂದಲೇ ಕಾಂಗ್ರೆಸ್ ದೇಶದಲ್ಲಿ ಯಾವ ಸ್ಥಿತಿಗೆ ಬಂದಿದೆ ಎಂಬುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಲೋಕಸಭೆ ಚಳಿಗಾಲದ ಅಧಿವೇಶನ ನಡೆಯುತ್ತದೆ. ಇದನ್ನು ಸಂಸತ್ ನಲ್ಲಿಯೇ ಚರ್ಚಿಸಬಹುದಾಗಿತ್ತು. ಈಗ ಜನರ ಮನೋಭಾವ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಪಿಎಂ ಕೇರ್ನಿಂದ ಖರೀದಿಸಿದ ವೆಂಟಿಲೇಟರ್ ಕಳಪೆಯಾಗಿಲ್ಲ.ಪಿಎಂ ಕೇರ್ಸ್ ನಿಂದ ಖರೀದಿಸಿದ ವೆಂಟಿಲೇಟರ್ ಗಳು ಬಂದು ಬಹಳ ದಿನವೇ ಆಗಿದೆ. ಪಿಎಂ ಕೇರ್ಸ್ ನಲ್ಲಿ 50 ಸಾವಿರ ವೆಂಟಿಲೇಟರ್ ಖರೀದಿಸಲಾಗಿದೆ. ಹೈ ಕ್ವಾಲಿಟಿ ವೆಂಟಿಲೇಟರ್ ಗಳನ್ನು ಪೂರೈಕೆ ಮಾಡಲಾಗಿದೆ. ಆದರೆ ಅದನ್ನು ರಾಜ್ಯಗಳಿಗೆ ಬಳಸಲಿಕ್ಕೆ ಬಾರದಿದ್ದರೆ ಅದಕ್ಕೆ ಕೇಂದ್ರ ಹೊಣೆಯಾ ಎಂದು ಪ್ರಶ್ನಿಸಿದರು.
ಕಿಟ್ ವಿತರಣೆ…ಕೊರೊನಾ ವಾರಿಯರ್ಸ್ ಗಳಿಗೆ ಹುಬ್ಬಳ್ಳಿಯ ಸರ್ಕೀಟ್ ಹೌಸ್ ನಲ್ಲಿ ಆಹಾರ ಸಾಮಗ್ರಿ ವಿತರಣೆ ಮಾಡಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಹಾರ ಕಿಟ್ ಗಳನ್ನು ವಿತರಿಸಿದರು. ಫುಡ್ ಬ್ಯಾಂಕಿಂಗ್ ನೆಟ್ ವರ್ಕ್ ಸಂಸ್ಥೆ ವತಿಯಿಂದ ಕೊರೋನಾ ವಾರಿಯರ್ಸ್ ಗೆ ಫುಡ್ ಕಿಟ್ ಗಳ ವಿತರಣೆ, ಪೌಷ್ಟಿಕ ಆಹಾರವನ್ನೊಳಗೊಂಡ ಫುಡ್ ಕಿಟ್ ವಿತರಿಸಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ