
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಾಜಿ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ.ಕೆ. ಅಗರ್‌ವಾಲ್ ಅವರು ಕೋವಿಡ್ -19 ರೊಂದಿಗಿನ ಸುದೀರ್ಘ ಯುದ್ಧದ ನಂತರ ನಿಧನರಾದರು.
ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಸೋಮವಾರ ರಾತ್ರಿ 11.30 ಕ್ಕೆ ಡಾ.ಕೆ.ಕೆ. ಅಗರ್ವಾಲ್ ನಿಧನರಾದರು.
ಡಾ. ಕೆ.ಕೆ. ಅಗರ್‌ವಾಲ್ ಅವರನ್ನು ಕಳೆದ ಕೆಲವು ದಿನಗಳಿಂದ ಏಮ್ಸ್ ಗೆ ದಾಖಲಿಸಲಾಗಿತ್ತು ಹಾಗೂ ವೆಂಟಿಲೇಟರ್ ಬೆಂಬಲದಲ್ಲಿದ್ದರು. ಕೋವಿಡ್ -19 ನೊಂದಿಗಿನ ಸುದೀರ್ಘ ಯುದ್ಧದ ನಂತರ ಡಾ.ಕೆ.ಕೆ.ಅಗರ್ವಾಲ್ ಮೃತಪಟ್ಟಿದ್ದಾರೆ ಎಂದು ತಮ್ಮ ಟ್ವಿಟ್ಟರ್ ಪ್ರೊಫೈಲ್‌ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅವರ ಕುಟುಂಬವು ಹೇಳಿಕೆಯೊಂದರಲ್ಲಿ, “ಅವರು ವೈದ್ಯರಾದಾಗಿನಿಂದಲೂ, ಡಾ.ಕೆ.ಕೆ. ಅಗರ್ವಾಲ್ ತಮ್ಮ ಜೀವನವನ್ನು ಸಾರ್ವಜನಿಕರ ಹಿತಕ್ಕಾಗಿ ಮೀಸಲಿಟ್ಟಿದ್ದಾರೆ ಮತ್ತು ಆರೋಗ್ಯ ಜಾಗೃತಿ ಮೂಡಿಸಿದ್ದಾರೆ” ಎಂದು ಹೇಳಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಸಹ, ಅವರು ಜನಸಾಮಾನ್ಯರಿಗೆ ಶಿಕ್ಷಣ ನೀಡಲು ನಿರಂತರ ಪ್ರಯತ್ನಗಳನ್ನು ಮಾಡಿದರು ಮತ್ತು ಹಲವಾರು ವಿಡಿಯೊಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ 100 ಮಿಲಿಯನ್ ಜನರನ್ನು ತಲುಪಲು ಸಾಧ್ಯವಾಯಿತು ಮತ್ತು ಅಸಂಖ್ಯಾತ ಜೀವಗಳನ್ನು ಉಳಿಸಿದರು ಎಂದು ಹೇಳಿದ್ದಾರೆ.
ಕಳೆದ ವರ್ಷದಲ್ಲಿ, ಡಾ. ಕೆ.ಕೆ. ಅಗರ್‌ವಾಲ್ ಅವರು ಕೊರೊನಾ ವೈರಸ್ ಸೋಂಕಿನ ವಿವಿಧ ಅಂಶಗಳ ಬಗ್ಗೆ ಮತ್ತು ಕೋವಿಡ್-ನಿಂದ ಚೇತರಿಸಿಕೊಂಡವರಲ್ಲಿ ಕಪ್ಪು ಶಿಲೀಂಧ್ರ ಸೋಂಕಿನ ಬಗ್ಗೆ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂತಾಪ ವ್ಯಕ್ತಪಡಿಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ