ಕೊಪ್ಪಳ (ಗಂಗಾವತಿ: )ಹೊಲದಲ್ಲಿ ಹಾಕಿದ್ದ ಕುರಿಹಟ್ಟಿಯ ಮೇಲೆ ಮೂರು ಚಿರತೆಗಳು ದಾಳಿ ನಡೆಸಿ 32 ಕುರಿಗಳನ್ನು ಕೊಂದು ಹಾಕಿ, ಅವುಗಳಲ್ಲಿ ಎಂಟು ಕುರಿಗಳನ್ನು ಚಿರತೆಗಳು ಹೊತ್ತುಕೊಂಡು ಹೋದ ಘಟನೆ ಗಂಗಾವತಿ ಹೊರವಲಯದ ಸಿದ್ಧಕೇರಿ ಹತ್ತಿರದ ಹೊಲದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಯಮನೂರಪ್ಪ ನಾಯಕ ಎಂಬುವವರಿಗೆ ಸೇರಿದ ಕುರಿ ಹಿಂಡನ್ನು ಹೊಲದಲ್ಲಿ ಕೂಡಿಹಾಕಲಾಗಿತ್ತು. ಮಂಗಳವಾರ ಬೆಳಗಿನ ಜಾವ ಮೂರು ಚಿರತೆಗಳು
ದಾಳಿ ನಡೆಸಿ 24 ಕುರಿಮರಿಗಳನ್ನು ಕೊಂದು ಹಾಕಿ ಎಂಟು ಕುರಿಗಳನ್ನು ಹೊತ್ತುಕೊಂಡು ಹೋಗಿವೆ. ಸ್ಥಳದಲ್ಲಿದ್ದ ಕುರಿ ಮಾಲೀಕರು ಹಾಗೂ ಆಳುಗಳು ಭಯಭೀತರಾಗಿ ಓಡಿಹೋಗಿದ್ದು ಕುರಿಗಾರರಿಗೆ ಅಪಾರ ನಷ್ಟವಾಗಿದೆ.
ಸ್ಥಳಕ್ಕೆ ಗ್ರಾಮೀಣ ಪೊಲೀಸರು ಹಾಗೂ ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ