ನಾರದ ಪ್ರಕರಣದಲ್ಲಿ 4 ಟಿಎಂಸಿ ಮುಖಂಡರಿಗೆ ತಕ್ಷಣದ ಪರಿಹಾರವಿಲ್ಲ; ವಿಚಾರಣೆ ನಾಳೆಗೆ ಮುಂದೂಡಿಕೆ

ಕೋಲ್ಕತ್ತಾ: ನಾರದ ಭ್ರಷ್ಟಾಚಾರದ ಕುಟುಕು ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಾಲ್ವರು ತೃಣಮೂಲ ಕಾಂಗ್ರೆಸ್ ನಾಯಕರು ಮತ್ತೊಂದು ದಿನ ನ್ಯಾಯಾಂಗ ಬಂಧನದಲ್ಲಿ ಉಳಿಯಲಿದ್ದಾರೆ. ನಾಳೆ (ಗುರುವಾರ) ಮಧ್ಯಾಹ್ನ 2 ಗಂಟೆಗೆ ವಿಚಾರಣೆ ಪುನರಾರಂಭಗೊಳ್ಳಲಿದೆ.
ನಾಲ್ಕು ಟಿಎಂಸಿ ಹೆವಿವೇಯ್ಟ್‌ಗಳಿಗೆ ಜಾಮೀನು ನೀಡುವ ವಿಶೇಷ ಸಿಬಿಐ ನ್ಯಾಯಾಲಯದ ಆದೇಶವನ್ನು ಸೋಮವಾರ ಹೈಕೋರ್ಟ್ ತಡೆಹಿಡಿದಿತ್ತು. ನಾರದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕೆಲವೇ ಗಂಟೆಗಳ ನಂತರ ವಿಶೇಷ ಸಿಬಿಐ ನ್ಯಾಯಾಲಯ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು.
ಪಶ್ಚಿಮ ಬಂಗಾಳದ ಮಂತ್ರಿಗಳಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ, ಶಾಸಕ ಮದನ್ ಮಿತ್ರ ಮತ್ತು ಕೋಲ್ಕತ್ತಾದ ಮಾಜಿ ಮುನ್ಸಿಪಲ್ ಕಾರ್ಪೋರೇಶನ್ ಮೇಯರ್ ಸೋವನ್ ಚಟರ್ಜಿ ಅವರಿಗೆ ನೀಡಿದ ಜಾಮೀನಿಗೆ ಕೋಲ್ಕತ್ತಾ ಹೈಕೋರ್ಟ್‌ ತಡೆ ನೀಡಿತ್ತು.
2016 ರ ನಾರದ ಸ್ಟಿಂಗ್ ಟೇಪ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಸೋಮವಾರ ಸಿಬಿಐ ಬಂಧಿಸಿದೆ, ಇದು ಹಲವಾರು ರಾಜಕಾರಣಿಗಳು ಮತ್ತು ಉನ್ನತ ಹುದ್ದೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಕಂಪನಿಗೆ ಅನಧಿಕೃತ ಅನುಮತಿಗೆ ಪ್ರತಿಯಾಗಿ ಹಣವನ್ನು ಸ್ವೀಕರಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿತ್ತು.
ಪಶ್ಚಿಮ ಬಂಗಾಳದಲ್ಲಿ ನಡೆದ 2016 ರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚೆಯೇ ನಾರದ ಟೇಪ್‌ಗಳು ಬೆಳಕಿಗೆ ಬಂದಿದ್ದವು. ಈ ಕುರಿತು ಸಿಬಿಐ ತನಿಖೆಗೆ 2017 ರ ಮಾರ್ಚ್‌ನಲ್ಲಿ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿತ್ತು.

ಪ್ರಮುಖ ಸುದ್ದಿ :-   ಸ್ಟೀಲ್‌ ತ್ಯಾಜ್ಯದಿಂದ ವಿಶ್ವದ ಅತಿ ಉದ್ದದ ರಸ್ತೆ ನಿರ್ಮಿಸಿದ ಜಿಂದಾಲ್ ಸ್ಟೀಲ್‌ ಕಂಪನಿ ; ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement