ಆಸ್ಪತ್ರೆಗೆ ಬರಲು ಮಗಳನ್ನು ಹೆಗಲ ಮೇಲೆ ಹೊತ್ತು 8 ಕಿಮೀ.ಹೊತ್ತು ನಡೆದ ತಂದೆ..

ಯಾದಗಿರಿ: ರಾಜ್ಯ ಸರಕಾರ ಕೋವಿಡ್​ಗೆ ಕಡಿವಾಣ ಹಾಕಲು ಲಾಕ್ ಡೌನ್ ಜಾರಿಗೆ ತಂದಿದೆ. ಯಾದಗಿರಿ ಜಿಲ್ಲೆಯಲ್ಲಿ ಕೂಡ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಜಿಲ್ಲಾಧಿಕಾರಿ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗಿದೆ.
ಜನರು ಯಾದಗಿರಿ ನಗರದೊಳಗೆ ಪ್ರವೇಶ ಮಾಡಲು ಪೊಲೀಸರು ನಿರ್ಬಂಧ ಹಾಕಿದ್ದಾರೆ. ತುರ್ತು ಕೆಲಸ, ಆಸ್ಪತ್ರೆಗೆ ಮಾತ್ರ ತೆರಳಲು ಅವಕಾಶ ಕೊಟ್ಟಿದ್ದಾರೆ. ಆದರೆ, ವ್ಯಕ್ತಿಯೊರ್ವ ದೂರದ ಊರಿಂದ ತನ್ನ ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ತೋರಿಸಲು 8 ಕಿ.ಮೀ ನಡೆದುಕೊಂಡು ಬಂದ ಘಟನೆ ವರದಿಯಾಗಿದೆ.
ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದ ನಿವಾಸಿ ಮರೇಪ್ಪ ಜ್ವರದಿಂದ ಬಳಲುತ್ತಿದ್ದ ತನ್ನ ಮಗಳನ್ನು ಆಸ್ಪತ್ರೆಗೆ ತೋರಿಸಲು ಪಗಲಾಪುರ ಗ್ರಾಮದಿಂದ ಯಾದಗಿರಿವರೆಗೆ ಹೆಗಲ ಮೇಲೆ ಹೊತ್ತುಕೊಂಡು ನಡೆದುಕೊಂಡು ಬಂದಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಪೊಲೀಸರು ಯಾರನ್ನೂ ಬಿಡುತ್ತಿಲ್ಲ. ವಾಹನಗಳನ್ನು ಜಪ್ತಿ ಮಾಡುತ್ತಿರುವ ಜೊತೆ ಪೊಲೀಸರು ಲಾಠಿಯಿಂದ ಹೊಡೆಯುತ್ತಿರುವ ಸುದ್ದಿ ಅರಿತು ಬೈಕ್ ತೆಗೆದುಕೊಂಡು ಬರಲು ತಂದೆ ಭಯದ ಕಾರಣಕ್ಕೆ ತಂದೆ ಮರೇಪ್ಪ ಪುತ್ರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕರೆದುಕೊಂಡು ಬಂದಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement