ಈ ವೈರಸ್ ನನ್ನ ಅನೇಕ ಪ್ರೀತಿಪಾತ್ರರನ್ನು ಕಸಿದುಕೊಂಡಿದೆ: ಭಾವುಕರಾದ ಪ್ರಧಾನಿ ಮೋದಿ

ನವ ದೆಹಲಿ: ಈ ವೈರಸ್ ನಮ್ಮಿಂದ ಅನೇಕ ಪ್ರೀತಿಪಾತ್ರರನ್ನು ಕಸಿದುಕೊಂಡಿದೆ. ನಾನು ಅವರಿಗೆ ನನ್ನ ವಿನಮ್ರ ಗೌರವವನ್ನು ಸಲ್ಲಿಸುತ್ತೇನೆ ಮತ್ತು ಜನರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೋವಿಡ್‌ಗೆ ಪ್ರಾಣ ಕಳೆದುಕೊಂಡವರ ಬಗ್ಗೆ ಶುಕ್ರವಾರ ಮಾತನಾಡಿದ ಪ್ರಧಾನಿ ಮೋದಿ ಭಾವುಕರಾಗಿದ್ದರು. ಅವರು ದೀರ್ಘ ವಿರಾಮ ತೆಗೆದುಕೊಂಡಾಗ ಬಿಕ್ಕಳಿಸಿದಂತೆ ಕಂಡರು.
ಉತ್ತರ ಪ್ರದೇಶದ ತಮ್ಮ ಸಂಸದೀಯ ಕ್ಷೇತ್ರವಾದ ವಾರಾಣಸಿಯಲ್ಲಿ ಆರೋಗ್ಯ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ವೈದ್ಯರು ಮತ್ತು ಮುಂಚೂಣಿ ಕೆಲಸಗಾರರಿಗೆ ಧನ್ಯವಾದ ಅರ್ಪಿಸಿದರು.
ಕೊರೊನಾ ಎರಡನೇ ಅಲೆಯಲ್ಲಿ ನಾವು ಒಂದೇ ಸಮಯದಲ್ಲಿ ಅನೇಕ ರಂಗಗಳಲ್ಲಿ ಹೋರಾಡುತ್ತಿದ್ದೇವೆ. ಸೋಂಕಿನ ಪ್ರಮಾಣವೂ ಹೆಚ್ಚು ಮತ್ತು ರೋಗಿಗಳು ಹೆಚ್ಚಿನ ಸಮಯದ ವರೆಗೆ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿದರು.
ಸೋಂಕಿನ ತೀವ್ರ ಅಲೆಯಲ್ಲಿ ಕೋವಿಡ್‌ನಿಂದ ಮರಣ ಹೊಂದಿದವರಿಗೆ ಪ್ರಧಾನಮಂತ್ರಿಯವರ ಭಾವನಾತ್ಮಕ ಗೌರವ ಸಲ್ಲಿಸಿದರು.
ಕಳೆದ ವಾರಗಳಲ್ಲಿ ಪ್ರಧಾನಿ ಮೋದಿಯವರ ಮೇಲೆ ಪ್ರತಿಪಕ್ಷಗಳು ಪದೇ ಪದೇ ದಾಳಿ ನಡೆಸಿವೆ, ಸರ್ಕಾರವು ಉಲ್ಬಣಕ್ಕೆ ಸಿದ್ಧತೆ ನಡೆಸುವಲ್ಲಿ ವಿಫಲವಾಗಿದೆ. ಕೋವಿಡ್ ವಿರುದ್ಧ ಜಯವನ್ನು ಘೋಷಿಸಿತು ಮತ್ತು ಲಸಿಕೆಗಳನ್ನು ರಫ್ತು ಮಾಡದೆ ದೇಶದ ಜನರನ್ನು ರಕ್ಷಿಸುವತ್ತ ಗಮನಹರಿಸಬೇಕಾಗಿತ್ತು ಎಂದು ಎಂದು ಆರೋಪಿಸಿತು.
ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ಮುಖಂಡರು ಪ್ರಧಾನ ಮಂತ್ರಿಗಳನ್ನು ಬಂಗಾಳದಲ್ಲಿ ವ್ಯಾಪಕ ಚುನಾವಣಾ ಪ್ರಚಾರಕ್ಕಾಗಿ ಮತ್ತು ಕೋವಿಡ್ ಸಮಯದಲ್ಲಿ ಜನಸಂದಣಿಯ ಸಮಾವೇಶ ಹಾಗೂ ಜಾಥಾಗಳಿಗಾಗಿ ತೀವ್ರವಾಗಿ ಟೀಕಿಸಿದರು.
ಮೇ ಆರಂಭದಲ್ಲಿ ಏರಿದ ನಂತರ, ಕಳೆದ ಎರಡು ವಾರಗಳಲ್ಲಿ ಕೋವಿಡ್ ಪ್ರಕರಣಗಳು ಕ್ಷೀಣಿಸುತ್ತಿವೆ ಆದರೆ ಮಕ್ಕಳ ಮೇಲೆ ಕಠಿಣವಾಗಬಹುದಾದ ಮೂರನೇ ಅಲೆಯ ವಿರುದ್ಧ ತಜ್ಞರು ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ಹ್ಯಾಟ್ರಿಕ್ ಸಾಧನೆ ! ಗ್ಲಾಸ್ಗೋ 2026 ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟು ದಾಖಲೆ ಬರೆದ ಮೀರಾಬಾಯಿ ಚಾನು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement