ಲೈಂಗಿಕ ದೌರ್ಜನ್ಯ: ತರುಣ್ ತೇಜ್ ಪಾಲ್ ನಿರ್ದೋಷಿ ಎಂದು ಗೋವಾ ಸೆಷನ್ಸ್ ಕೋರ್ಟ್

ಪಣಜಿ: ಸಹೋದ್ಯೋಗಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಸೆಷನ್ಸ್ ಕೋರ್ಟ್ ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಅವರು ನಿರ್ದೋಷಿ ಎಂದು ತೀರ್ಪು ನೀಡಿದೆ.

ತರುಣ್ ತೇಜ್‌ಪಾಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತೀರ್ಪನ್ನು ಮೇ 21ರಂದು ಪ್ರಕಟಿಸುವುದಾಗಿ ಗೋವಾದ ಸೆಷನ್ಸ್ ನ್ಯಾಯಾಲಯವು ಬುಧವಾರ ಹೇಳಿತ್ತು. ಅದರಂತೆ ಶುಕ್ರವಾರ ತೀರ್ಪು ಪ್ರಕಟಿಸಿದ ಗೋವಾ ಸೆಷನ್ಸ್ ಕೋರ್ಟ್ ತೇಜ್ಪಾಲ್ ನಿರ್ದೋಷಿ ಎಂದು ಹೇಳಿದೆ.
ಪ್ರಕರಣದ ಅಂತಿಮ ಹಂತದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ನ್ಯಾಯಧೀಶೆ ಕ್ಷಮಾ ಜೋಶಿ ಅವರು, ತಾಂತ್ರಿಕ ಕಾರಣಗಳಿಂದಾಗಿ ತೀರ್ಪನ್ನು ಮೇ 21ಕ್ಕೆ ಕಾಯ್ದಿರಿಸಿದ್ದರು.
ಪ್ರಕರಣದ ಕುರಿತು ಏಪ್ರಿಲ್ 27ರಂದು ತೀರ್ಪು ಪ್ರಕಟಿಸಬೇಕಿತ್ತು. ಆದರೆ ನ್ಯಾಯಾಧೀಶರು ತೀರ್ಪು ನೀಡುವ ದಿನಾಂಕವನ್ನು ಮೇ 12ಕ್ಕೆ ಮುಂದೂಡಿದ್ದರು. ಬಳಿಕ ಈ ದಿನಾಂಕವನ್ನು ಮೇ 19ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಸತತ ಮೂರನೇ ಬಾರಿ ನ್ಯಾಯಾಲಯವು ತೀರ್ಪನ್ನು ಮಂದೂಡಿತ್ತು. ತೌಕ್ಟೆ’ ಚಂಡಮಾರುತದಿಂದಾಗಿ ಗೋವಾದ ಹಲವೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಿದ್ದರಿಂದ ಮೇ 21ಕ್ಕೆ ಮುಂದೂಡಲಾಗಿತ್ತು.
2013ರಲ್ಲಿ ಗೋವಾದ ಐಷಾರಾಮಿ ಹೋಟೆಲ್‌ನ ಲಿಫ್ಟ್‌ನೊಳಗೆ ಮಹಿಳಾ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ತರುಣ್ ತೇಜ್ ಪಾಲ್ ಎದುರಿಸುತ್ತಿದ್ದಾರೆ. 2013ರ ನವೆಂಬರ್ 30ರಂದು ತೇಜ್ ಪಾಲ್ ಅವರನ್ನು ಬಂಧಿಸಲಾಗಿತ್ತು. ಬಳಿಕ ತೇಜ್ ಪಾಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಳಿಕ 2017 ಸೆಪ್ಟೆಂಬರ್ 29ರಂದು ಗೋವಾ ಸೆಷನ್ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ವಿರುದ್ಧ ತೇಜ್ ಪಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆಗಸ್ಟ್ ನಲ್ಲಿ ಈ ಪ್ರಕರಣದ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ತೇಜ್ ಪಾಲ್ ಅರ್ಜಿ ವಜಾಗೊಳಿಸಿತ್ತು. ಹಾಗೂ ಆರು ತಿಂಗಳೊಳಗೆ ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸುವಂತೆ ಗೋವಾ ಕೋರ್ಟ್ ಗೆ ಸೂಚಿಸಿತ್ತು.

ಪ್ರಮುಖ ಸುದ್ದಿ :-   ಯುಪಿಐನಲ್ಲಿ ₹2,000ಕ್ಕಿಂತ ಹೆಚ್ಚಿನ ಹಣ ಪಾವತಿಗೆ ಶೇ. 0.4ರಷ್ಟು ಶುಲ್ಕ ; ಇದು ಯಾರಿಗೆ ಅನ್ವಯ, ಯಾರಿಗೆ ಎಂದಿನಂತೆ ಫ್ರೀ?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement