ಬೆಂಗಳೂರು: ಮಹಾಮಾರಿ ಕೊರೊನಾ ಈಗ ಬೆಂಗಳೂರು ಮಹಾನಗರದಲ್ಲಿ ಕಡಿಮೆಯಾಗುತ್ತಿದ್ದು, ರಾಜ್ಯದ ಇತರ ಭಾಗಗಳಲ್ಲಿ ಮುಖಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ವ್ಯಾಪಿಸುತ್ತಿದೆ. ಈ ಕಾರಣಕ್ಕಾಗಿಯೇ ಈಗ ಒಂದೊಂದೇ ಜಿಲ್ಲೆಗಳಲ್ಲಿ ಈಗ ಸಂಪೂರ್ಣ ಲಾಕ್ಡೌನ್ ಮಾಡಲಾಗುತ್ತಿದೆ.
ಚಿಕ್ಕಬಳ್ಳಾಪುರ,ಚಿಕ್ಕಮಗಳೂರು, ಕೊಪ್ಪಳ. ಬಳ್ಳಾರಿ, ಕಲಬುರಗಿ,ಹಾಸನ, ಚಾಮರಾಜನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಹಾಲು, ವೈದ್ಯಕೀಯ ಸೇವೆ ಹೋರತು ಪಡಿಸಿ ಉಳಿದೆಲ್ಲವನ್ನೂ ಬಂದ್ ಮಾಡಲಾಗಿದೆ.
ಶುಕ್ರವಾರದಿಂದ ಕೋಲಾರ ಹಾಗೂ ದಾವಣಗೆರೆ ,ಉತ್ತರ ಕನ್ನಡ ಜಿಲ್ಲೆ ಘಟ್ಟದ ಮೇಲಿನ ನಾಲ್ಕು ತಾಲೂಕುಗಳು ಸಂಪೂರ್ಣ ಸ್ತಬ್ದವಾಗಲಿವೆ. ಅನಗತ್ಯವಾಗಿ ಓಡಾಡುವವರ ವಾಹನಗಳನ್ನು ಕೂಡ ಸೀಜ್ ಮಾಡಲಾಗುತ್ತಿದೆ.
ದಿನದಿಂದ ದಿನಕ್ಕೆ ಗ್ರಾಮಾಂತರ ಪ್ರದೇಶ ಗಳಲ್ಲಿ ಸೊಂಕಿತರ ಹಾಗೂ ಮೃತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದಕ್ಕೆ ಗ್ರಾಮೀಣರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮದುವೆ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದೇ ಕಾರಣ ಎನ್ನಲಾಗುತ್ತಿದೆ.
ಇದರ ಜೊತೆಗೆ
ಲಾಕ್ಡೌನ್ ಜಾರಿಯಾದ ನಂತರ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಜನರು ತಮ್ಮ ಹಳ್ಳಿ ಸೇರಿದ್ದು ಯಾವುದೇ ಕ್ವಾರಂಟೈನ್ ಕ್ರಮ ಅನುಸರಿಸದ ಕಾರಣ ಗ್ರಾಮಗಳಿಗೆ ಕೊರೊನಾ ವ್ಯಾಪಿಸುವಂತಾಗಿದೆ. ವಿವಿಧೆಡೆ ನೆಲೆಸಿದ್ದ ಜನರು ತಮ್ಮ ತಮ್ಮ ಊರುಗಳು ಸೇರಿದ್ದು ಸೊಂಕಿತರು ಕೆಲದಿನ ಐಸೋಲೆಷನ್ ಆಗದೆ ಬೆಕಾಬಿಟ್ಟಿಯಾಗಿ ಗ್ರಾಮಗಳಲ್ಲಿ ಓಡಾಡಿದ್ದರಿಂದ ಸೊಂಕು ಉಲ್ಬಣಗೊಂಡಿದೆ ಎಂದು ಹೇಳಲಾಗುತ್ತಿದೆ.
ಗ್ರಾಮೀಣ ಜನರ ನಿರ್ಲಕ್ಷ :
ನಾವು ಹಳ್ಳಿಯವರು, ಬೆವರು ಹರಿಸಿ ಕೆಲ್ಸ ಮಾಡ್ತೇವೆ. ನಮ್ಮ ಬಳಿ ಯಾವುದೆ ಸೊಂಕು ಸುಳಿಯುವುದಿಲ್ಲ ನಮಗ್ಯಾಕೆ ಮಾಸ್ಕು. ಸ್ಯಾನಿಟೈಸರ್ , ಇದೆಲ್ಲ ಕಿಡ್ನಿ, ಕಣ್ಣು ತೆಗೆದು ಮಾರಾಟ ಮಾಡುವವರು ಸೇರಿ ಆಡಿದ ನಾಟಕ ಎಂಬಿತ್ಯಾದಿ ಸುದ್ದಿಗಳೇ ಗ್ರಾಮೀಣದಲ್ಲಿ ಹರಿದಾಡುತ್ತಿವೆ. ಜೊತೆಗೆ ಇದು ಬಿಸಿಲಿಗೆ ಮೈಒಡ್ಡುವವರಿಗೆ ಬರುವುದಿಲ್ಲ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಹೀಗಾಗಿಯೇ ಹಳ್ಳಿಗಳಲ್ಲಿ ಕಟ್ಟೆಗಳ ಮೇಲೆ ಗುಂಪು ಸೇರಿ ಇದೇ ಸುದ್ದಿಗಳ ಬಗ್ಗೆ ಚರ್ಚೆ ಮಾಡುತ್ತಾರೆಯೇ ವಿನಃ ಯಾವುದೇ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದಿಲ್ಲ. ಕೆಲವಡೆ ಈಗ ಸಮುದಾಯಕ್ಕೆ ಹಬ್ಬಿದ ನಂತರ ಮಅಸ್ಕ್ ಹಾಕಲು ಅರಂಭಿಸಿದ್ದಾರೆ. ಜೊತೆಗೆ ಕೊರೊನಾವೇ ಸುಳ್ಳು, ಅದು ದುಡ್ಡು ಮಾಡುವ ವೈದ್ಯಕೀಯ ಲಾಬಿ ಎಂಬ ದೊಡ್ಡ ಗುಂಪೇ ಗ್ರಾಮೀನ ಪ್ರದೇಶಗಳಲ್ಲಿ ಸೃಷ್ಟಿಯಾಗುತ್ತಾರೆ. ಕಟ್ಟೆಮೇಲೆ ಈ ಬಗ್ಗೆ ನಾಲ್ಕು ಜನರ ಮಧ್ಯೆ ಮಾತನಾಡುವಾಗ ಅವರೇವಿಜ್ಞಾನಿಗಳಾಗುತ್ತಾರೆ, ತಜ್ಞ ವೈದ್ಯರಾಗುತ್ತಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ ಗ್ರಾಮೀಣದಲ್ಲಿ ಮಾಸ್ಕ್ ಹಾಕುವವರಿಗೆ ಗೇಲಿ ಮಾಡುವ ಪ್ರವೃತ್ತಿಯೂ ಹೆಚ್ಚಾಗಿದೆ. ಇದನ್ನೆಲ್ಲ ಗಮನಿಸಿಯೇ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಗ್ರಾಮೀನ ಪ್ರದೇಶದಲ್ಲಿ ಹೋಮ್ ಐಸೋಲೇಶನ್ ಬೇಡ ಎಂದು ಹೇಳಿ ಹಳ್ಳಿಗಳಲ್ಲಿ ಸೋಂಕು ಕಂಡುಬಂದರೆ ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಕ್ಕೇ ದಾಖಲಿಸಬೇಕು ಎಂಬ ತೀರ್ಮಾನ ಕೈಗೊಂಡಿದೆ.
ಸ್ಥಳೀಯ ಆಡಳಿತಗಳ ವಿಫಲ:
ರಾಜ್ಯದ ಕೆಲ ಗ್ರಾಮಪಂಚಾಯ್ತಿಗಳು ಯಾವುದೆ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ ಹೊರಗಿನಿಂದ ಬಂದವರ ಮೆಲೆ ನಿಗಾ ಇಟ್ಟಿಲ್ಲ ಅಲ್ಲದೆ ಸೊಂಕಿತರ ಐಸೊಲೆಷನ್ ಕೆಂದ್ರಗಳ ವ್ಯವಸ್ಥೆ ಇಲ್ಲ. ಸೊಂಕಿತರು ಜಿಲ್ಲಾ ಕೆಂದ್ರಗಳ ಆರೈಕೆ ಕೆಂದ್ರಗಳಲ್ಲಿ ದಾಖಲಾಗುವಂತಹ ಅನಿವಾರ್ಯತೆ ಎದುರಾಗಿದೆ,
ಸ್ಥಳಿಯ ಜನ ಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಸ್ವಚ್ಚತೆಗೆ ಒತ್ತು ನೀಡುತ್ತಿಲ್ಲ. ಗ್ರಾಮಗಳಲ್ಲಿ ಸ್ಯಾನಿಟೈಸರ್ ಮಾಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಇರುವ ಕಾಳಜಿ ಸಂಕಷ್ಟ ಸಮಯದಲ್ಲಿ ಯಾಕಿರುವುದಿಲ್ಲ ಎಂಬುದು ಹಲವರ ಪ್ರಶ್ನೆ.


ನಿಮ್ಮ ಕಾಮೆಂಟ್ ಬರೆಯಿರಿ