ನವ ದೆಹಲಿ; ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನ ೨ನೇ ಅಲೆ ಹರಡಿದ ವೇಗಕ್ಕೆ ಎಂಥವರೂ ಗಾಬರಿಗೊಳ್ಳಲೇಬೇಕು. ಮೇ ತಿಂಗಳೇ ಈ ಭಯಾನಕ ಹರಡುವಿಕೆಗೆ ಸಾಕ್ಷಿಯಾಗಿದೆ.
ಈ ತಿಂಗಳ ಮೊದಲ ೨೧ ದಿನಗಳಲ್ಲಿ ಬರೋಬ್ಬರಿ ೭೧ ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದೆ.ಅಂದರೆ ಕೋವಿಡ್ ರೂಪಅಂತರಗಳು ಅಷ್ಟೊಂದು ವೇಗವಾಗಿ ಸೋಂಕನ್ನು ಹರಡಿದೆ.
ಏಪ್ರಿಲ್‌ನಲ್ಲಿ ಒಟ್ಟು ೬೯.೪ ಲಕ್ಷ ಮಂದಿಗೆ ಸೋಂಕು ತಗುಲಿತ್ತು. ಈಗ ಮೇ ತಿಂಗಳಿನಲ್ಲಿ ತಿಂಗಳು ಮುಗಿಯಲು ಹತ್ತು ದಿನಗಳಿರುವಾಗಲೇ ಈ ದಾಖಲೆ ಮೀರಿ ಸೋಂಕಿನ ಸಂಖ್ಯೆ ಮುನ್ನಡೆದಿದೆ. ಕೇವಲ ೨೧ ದಿನಗಳಲ್ಲಿ ದೇಶದ ೭೧.೩ ಲಕ್ಷ ಜನರಿಗೆ ಸೋಂಕು ತಗುಲಿದೆ.
ಕಳೆದ ವರ್ಷ ಪ್ರಾರಂಭವಾದ ಈ ಸಾಂಕ್ರಾಮಿಕ ಪಿಡುಗಿಗೆ ಹೋಲಿಸಿದರೆ ಶೇ. ೨೭ ರಷ್ಟು ಹೆಚ್ಚಾಗಿದೆ. ಈ ತಿಂಗಳಿನಲ್ಲಿ ಸಾವಿನ ಪ್ರಮಾಣವು ಅಧಿಕವಾಗಿದೆ. ಈ ತಿಂಗಳಿನಲ್ಲಿ ಒಟ್ಟು ೮೩.೧೩೫ ಸಾವುಗಳು ಸಂಭವಿಸಿದೆ. ಕಳೆದ ತಿಂಗಳು ೪೮,೭೬೮ ಮಂದಿ ಮೃತಪಟ್ಟಿದ್ದರು. ೨ನೇ ಅಲೆ ವ್ಯಾಪಕವಾಗಿ ಹರಡಿದ್ದರಿಂದ ಸಾವಿನ ಸಂಖ್ಯೆ ಮತ್ತು ಸೋಂಕು ತಗಲುವ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ ಕಂಡುಬಂದಿದೆ.
ಈ ತಿಂಗಳೊಂದರಲ್ಲೇ ಸರಾಸರಿ ಪ್ರತಿದಿನ ೪ ಸಾವಿರ ಮಂದಿ ಸೋಂಕಿಗೆ ಸಾವಿಗೀಡಾಗಿದ್ದಾರೆ. ಆದರೆ, ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕು ಪ್ರತಿದಿನ ೨.೫೦ ಲಕ್ಷ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಸಾವಿನ ಸಂಖ್ಯೆ ಮಾತ್ರ ಇಳಿಕೆಯಾಗುತ್ತಿಲ್ಲ. ಇದು ತಜ್ಞರ ಕಳವಳಕ್ಕೆ ಕಾರಣವಾಗಿದೆ.
ಮೇ ೩ ರಂದು ದೇಶದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ೩,೫೦೦ಕ್ಕೆ ಇಳಿಕೆಯಾಗಿರುವುದು ಅಂಕಿ-ಅಂಶದಿಂದ ತಿಳಿದು ಬಂದಿದೆ.
ಮೇ ೨ ರಂದು ೩,೯೬೮ ಸಾವುಗಳು ಸಂಭವಿಸಿ ಆನಂತರ ಈ ಸಂಖ್ಯೆ ೩,೪೭೮ಕ್ಕೆ ಇಳಿಕೆಯಾಗಿತ್ತು, ಆದರೆ ನಂತರದಲ್ಲಿ ಸಾವಿನ ಸಂಖ್ಯೆ ೪ ಸಾವಿರಕ್ಕಿಂತ ಹೆಚ್ಚಿಗೆ ಬರಲು ಆರಂಭಸಿದೆ. ಕೆಲವರ ಪ್ರಕಾರ ಇದು ದೈನಂದಿನ ಪ್ರಕರಣಗಳು ಕಡಿಮೆಯಾಗಲು ಆರಂಭಿಸಿದ ನಂತರದಲ್ಲಿ ಸಾವಿನ ಪ್ರಕರಣಗಳು ಕಡಿಮೆಯಾಗಲು ೧೫ ದಿನಗಳನ್ನು ತೆಗೆದುಕೊಳ್ಳುತ್ತವೆ. ಯಾಕೆಂದರೆ ರೋಗಿಗಳು ಮರಣ ಹೊಂದುತ್ತಿರುವವರಲ್ಲಿ ಬಹುತೇಕರು ಹೈದನೈದು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾದವರು. ಹೀಗಾಗಿ ಸಾವಿನ ಸಂಖ್ಯೆ ಕಡಿಮೆಯಾಗಲು ಇನ್ನೂ ಎಂಟರಿಂದ ಹತ್ತು ದಿನಗಳು ಬೇಕಾಗಬಹುದು ಎನ್ನುತ್ತಾರೆ ಅವರು.
ಕರ್ನಾಟಕದಲ್ಲಿಯೂ ಚೇತರಿಕೆ ಪ್ರಮಾಣ ಹೆಚ್ಚಾಗಿದೆ. ಕಳೆದ ಐದು ದನಗಳಿಂದ ಚೇರಿಕೆಯಾದವರ ಸಂಖ್ಯೆಯು ದೈನಂದಿನ ಸೋಂಕಿತರ ಸಂಖ್ಯೆಗಿಂತ ಬಹುತೇಕ ದ್ವಗಿಣದ ಸಮೀಪವಿದೆ. ಬೆಂಗಳೂರಿನಲ್ಲೂ ಸೋಂಕು ಇಳಿಕೆಯಾಗುವ ಲಕ್ಷಣಗಳು ಕಂಡು ಬಂದಿವೆ. ಆದರೆ, ರಾಜ್ಯದಲ್ಲಿಯೂ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿಲ್ಲ. ಇದು ಸಂಭವಿಸಲು ಇನ್ನೂ ಎಂಟರಿಂದ ಹತ್ತು ದಿನಗಳು ಬೇಕಾಗಬಹುದು ಎನ್ನುತ್ತಾರೆ ವಿಜ್ಞಾನಿಗಳು.
ಆದರೆ ಕರ್ನಾಟಕದ ಗ್ರಾಮೀನ ಪ್ರದೇಶಗಳು ಈಗ ಕೊರೊನಾ ಸಾಂಕ್ರಾಮಿಕದ ಹರಡುವ ಕೇಂದ್ರಗಳಾಗಿವೆ. ಇದಕ್ಕೆ ಕಾರಣ ಮಾರ್ಗಸೂಚಿ ಉಲ್ಲಂಘಿಸ ನಡೆಯುತ್ತಿರುವ ಮದುವೆಗಳು ಹಾಗೂ ಈ ರೋಗ ಹವಾನಿಯಂತ್ರಣದಲ್ಲಿ ಕುಳಿತವರಿಗೆ ಮಾತ್ರ ಬರುತ್ತದೆಯೇ ಹೊರತ ಬಿಸಿಲಿಗೆ ಮೈಒಡ್ಡುವರಿಗೆ ಬರುವುದಿಲ್ಲವೆಂಬ ಭ್ರಮೆ ಮುಖ್ ಕಾರಣವಾಗಿದೆ. ಮೂರನೆಯದಾಗಿ ಮನೆ ಪ್ರತ್ಯೇಕತೆಯಲ್ಲಿ ಇರುವ ಸೋಂಕಿತರು ಅದನ್ನು ಸರಿಯಾಗಿ ಪಾಲಿಸದೆ ಮದುವೆ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ವಿದ್ಯಮಾನಗಳೂ ವರದಿಯಾಗಿವೆ. ಈ ಕಾರಣಕ್ಕಾಗಿಯೇ ಸರ್ಕಾರ ಈಗ ಹಲ್ಳಿಗಳಲ್ಲಿ ಮನೆ ಪ್ರತ್ಯೇಕತೆ ಇಲ್ಲ, ಅವರು ಕೋವಿಡ್ ಕೇಂದ್ರಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂದು ಸೂಚಿಸಿದೆ.
ಈ ಮಧ್ಯೆ ಈಗ ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರ ಈಗಾಲೇ ಇದನ್ನು ಸಾಂಕ್ರಾಮಿಕ ಎಂದು ಪರಗಣಿಸಿದೆ ಹಾಗೂ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವುದಾಗಿ ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ