ಭಾರತದಲ್ಲಿ ಆಗಸ್ಟ್​ನಿಂದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ ಆರಂಭ

ನವ ದೆಹಲಿ: ಶೀಘ್ರದಲ್ಲಿಯೇ ಸ್ಪುಟ್ನಿಕ್ ವಿ ತಯಾರಿಕಾ ಫಾರ್ಮುಲಾವನ್ನು ಭಾರತಕ್ಕೆ ನೀಡಲಿಗು, ಆಗಸ್ಟ್​ನಿಂದ ಲಸಿಕೆ ಉತ್ಪಾದನೆ ಆರಂಭವಾಗಲಿದೆ ಎಂದು ರಷ್ಯಾ ಭಾರತದ ರಾಯಭಾರಿ ಡಿ.ಬಿ. ವೆಂಕಟೇಶ್ ವರ್ಮಾ ಶನಿವಾರ ತಿಳಿಸಿದ್ದಾರೆ.
ಭಾರತಕ್ಕೆ ರಷ್ಯಾ ಮೇ ಅಂತ್ಯದ ವೇಳೆಗೆ 3 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಸಿಕೆಯನ್ನು ಒಟ್ಟಿಗೆ ಪೂರೈಕೆ ಮಾಡಲಿದೆ. ಮತ್ತು ಜೂನ್​ನಲ್ಲಿ ಈ ಸಂಖ್ಯೆಯನ್ನು 5 ಮಿಲಿಯನ್​ಗೆ ಹೆಚ್ಚಿಸುವ ನಿರೀಕ್ಷೆ ಇದೆ ಎಂದು ವೆಂಕಟೇಶ್ ವರ್ಮಾ ತಿಳಿಸಿದ್ದಾರೆ.
ಭಾರತದಲ್ಲಿ ಆರಂಭದಲ್ಲಿ 850 ಮಿಲಿಯನ್ ಡೋಸ್ ಲಸಿಕೆ ಉತ್ಪಾದಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ರಷ್ಯಾ ಈಗಾಗಲೇ ಭಾರತದ ಡಾ ರೆಡ್ಡಿಸ್ ಸಂಸ್ಥೆಯ ಸಹಯೋಗದೊಂದಿಗೆ ಲಸಿಕೆ ಉತ್ಪಾದನೆ ಮಾಡುತ್ತಿದೆ. ಈಗಾಗಲೇ ಭಾರತಕ್ಕೆ ಎರಡು ಲಕ್ಷ ಡೋಸ್ ಪೂರೈಕೆ ಮಾಡಿದೆ. ಸ್ಪುಟ್ನಿಕ್ ವಿ ಈಗಾಗಲೇ ಭಾರತಕ್ಕೆ 1,50,000 ಡೋಸ್ ಹಾಗೂ ಆನಂತರ 60,000 ಡೋಸ್ ಭಾರತಕ್ಕೆ ಪೂರೈಕೆ ಮಾಡಲಾಗಿದೆ.
ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ. ಆದರೆ, ದೇಶಾದ್ಯಂತ ಸ್ಪುಟ್ನಿಕ್ ವಿ ಲಸಿಕೆ ವ್ಯಾಪಕವಾಗಿ ಲಭ್ಯವಾಗುತ್ತಿಲ್ಲ. ರಷ್ಯಾದಿಂದ ಆಮದು ಮಾಡಿಕೊಳ್ಳಲಾದ ಸ್ಪುಟ್ನಿಕ್ ವಿ ಲಸಿಕೆ ಪ್ರಸ್ತುತ ಪ್ರತಿ ಡೋಸ್​ಗೆ 948 ರೂ. ಇದೆ. ಇದಕ್ಕೆ ಶೇ. 5ರಷ್ಟು ಜಿಎಸ್​ಟಿ ಇದ್ದು ಪ್ರತಿ ಡೋಸ್ ಬೆಲೆ 995.4 ರೂಪಾಯಿ ತಗುಲಲಿದೆ. ಕೊರೋನಾ ನಿಯಂತ್ರಣಕ್ಕೆ ಭಾರತದಲ್ಲಿ ಮೂರು ಲಸಿಕೆಗಳನ್ನು ನೀಡಲು ಅನುಮೋದನೆ ನೀಡಲಾಗಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್ ಹಾಗೂ ಸ್ಪುಟ್ನಿಕ್ ವಿ ಲಸಿಕೆಗಳನ್ನು ದೇಶಾದ್ಯಂತ ಜನರಿಗೆ ನೀಡಲಾಗುತ್ತಿದೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement