ಮೈಸೂರು ಬಳಿ ಮೂರು ಚಿರತೆಗಳ ಅನುಮಾನಾಸ್ಪದ ಸಾವು

ಮೈಸೂರು: ಬೆಳವಾಡಿ  ಕೈಗಾರಿಕಾ ಪ್ರದೇಶದ ಬಯಲು ಪ್ರದೇಶದಲ್ಲಿ ಮೂರು ಚಿರತೆಗಳ ಶವಪತ್ತೆಯಾಗಿದೆ. ಇದಕ್ಕೆ ವಿಷ ಪ್ರಾಷನ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಎರಡು ದಿನಗಳ ಹಿಂದಷ್ಟೇ ಬೆಮೆಲ್ ಕಾರ್ಖಾನೆಯ ಕಾಂಪೌಂಡ್ ಬಳಿ ಸಿಸಿಟಿವಿಯಲ್ಲಿ ಈ ತಾಯಿ ಚಿರತೆ ಹಾಗೂ ಎರಡು ಚಿರತೆ ಮರಿಗಳುಸೆರೆಯಾಗಿದ್ದವು. ತಿನ್ನುವ ಆಹಾರದಲ್ಲಿ ವಿಷ ಬೆರಸಿ ದುಷ್ಕರ್ಮಿಗಳು ಚಿರತೆಗಳಿಗೆ ವಿಷ ಪ್ರಾಶನ ಮಾಡಿರಬಹುದು ಎಂದು ಪರಿಸರ ಪ್ರೇಮಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಳವಾಡಿ ಗ್ರಾಮದ ಹೊರವಲಯದಲ್ಲಿ ಅನುಮಾನಾಸ್ಪದವಾಗಿ ಮೂರು ಚಿರತೆಗಳು ಸಾವನ್ನಪ್ಪಿರುವುದನ್ನು ಗಮನಿಸಿದ ಗ್ರಾಮಸ್ಥರು, ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು, ಪರಿಶೀಲನೆ ನಡೆಸಿ ಚಿರತೆಗಳ ಕಳೇಬರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

 

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವಿಡಿಯೊ | ಆನೇಕಲ್‌ ; ಧಗಧಗನೆ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement