ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡ್ತಿರುವ ಅಂತಾರಾಷ್ಟ್ರೀಯ ಪುಟ್ಬಾಲ್ ಆಟಗಾರ್ತಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು ನೆರವಿನ ಭರವಸೆ

ನವ ದೆಹಲಿ: ಕುಟುಂಬದ ಹಸಿವು ನೀಗಿಸಲು ದಿನಗೂಲಿ ಕೆಲಸ ಮಾಡುತ್ತಿದ್ದ ಭಾರತ ಮಹಿಳಾ ತಂಡದ ಪುಟ್ಬಾಲ್ ಆಟಗಾರ್ತಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ನೆರವು ನೀಡಲು ಮುಂದಾಗಿದ್ದಾರೆ.
ಜಾರ್ಖಂಡ್ ಮಹಿಳಾ ಫುಟ್‌ಬಾಲ್ ತಂಡಕ್ಕೆ ಸಂಗೀತಾ ನಾಯಕಿಯಾಗಿದ್ದರು. ಕೋವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕುಟುಂಬದ ಹಸಿವು ನೀಗಿಸಲು ಸಂಗೀತಾ ಸೊರೇನ್ ಜಾರ್ಖಂಡ್ ನ ಭುಲಿ ಗ್ರಾಮದಲ್ಲಿ ಇಟ್ಟಿಗೆ ತಯಾರಿಸುವ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ.
ಈ ವಿಚಾರ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರ ಗಮನಕ್ಕೆ ಬಂದಿದೆ. ಸಂಗೀತಾ ಸಂಕಷ್ಟದಲ್ಲಿರುವ ಮಾಹಿತಿ ಗೊತ್ತಾಗಿದ್ದು, ತಮ್ಮ ಕಚೇರಿಯಿಂದ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಶೀಘ್ರವೇ ಸಂಗೀತಾ ಅವರಿಗೆ ಅಗತ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ. ಸಂಗೀತಾ ಅವರಿಗೆ ಆರ್ಥಿಕ ಸಹಾಯ ನೀಡಲಾಗುವುದು. ಕ್ರೀಡಾಪಟುಗಳಿಗೆ ಗೌರವಾನ್ವಿತ ಜೀವನವನ್ನು ಖಾತರಿಪಡಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಸಚಿವ ರಿಜುಜು ಟ್ವೀಟ್‌ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಆಪರೇಷನ್ ಸಿಂಧೂರ ದಾಳಿಯಲ್ಲಿ ಈ ಐವರು ನೊಟೊರಿಯಸ್‌ ಭಯೋತ್ಪಾದಕರ ಹತ್ಯೆ ; ಆದ್ರೆ ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ನೀಡಿದ ಪಾಕ್‌..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement