ಅಪ್ಪನ ಹೆಣ ಬೇಡ..ಆದರೆ ಅಪ್ಪನ ಹಣ ಮಾತ್ರ ಬೇಕೆಂದ ಪುತ್ರ ಮಹಾಶಯ..!

ಮೈಸೂರು: ಕೊರೊನಾ ಸೋಂಕು ಅಟ್ಟಹಾಸದಲ್ಲಿ ಮಾನವೀಯತೆ ಎನ್ನುವುದು ಮರೆಯಾಗುತ್ತಿದೆ. ನನ್ನವರು ತನ್ನವರು ಎನ್ನುವುದೇ ಮರೆಯಾಗುತ್ತಿದೆ ಎಂಬುದಕ್ಕೆ ಮೈಸೂರಿನಲ್ಲಿ ನಡೆದ ಈ ವಿದ್ಯಮಾನವೇ ಪುಷ್ಟಿ ನೀಡುತ್ತಿದೆ.

ಹೆಬ್ಬಾಳದ ಸೂರ್ಯ ಬೇಕರಿ ಬಳಿಯ ನಿವಾಸಿಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ಮಹಾನಗರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಹಾಗೂ ಇತರರು ಸ್ಥಳಕ್ಕಾಮಿಸಿ ಮೃತದೇಹ ಸಾಗಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ ಕೆ.ವಿ.ಶ್ರೀಧರ್ ಅವರು ಮೃತರ ಮಗನಿಗೆ ಕರೆ ಮಾಡಿ ತಂದೆ ಮೃತಪಟ್ಟ ಬಗ್ಗೆ ವಿಷಯ ಮುಟ್ಟಿಸಿದ್ದಾರೆ.  ಆದರೆ ಅವರ ಮಗ ಮಾತ್ರ ಸ್ಥಳಕ್ಕೆ ಬರಲಿಲ್ಲ. ಅಷ್ಟೇ ಅಲ್ಲ, ಮೃತದೇಹ ಪಡೆಯಲು ಹಿಂದೇಟು ಹಾಕಿದ್ದಾರೆ. ಆದರೆ ತಂದೆ ಬಳಿ ಇತ್ತು ಎನ್ನಲಾದ 6 ಲಕ್ಷ ರೂ.ಗಳ ಹಣ ಹಾಗೂ ದಾಖಲೆಗಳನ್ನ ತಂದು ಕೊಡಿ.’ನೀವೇ ಅಂತ್ಯಕ್ರಿಯೆ ಮುಗಿಸಿ. ನೀವು ಮಾಡಿರುವ ಖರ್ಚನ್ನು ಅದೇ ಹಣದಲ್ಲಿ ನಿಮಗೆ ಕೊಡುತ್ತೇನೆ ಎಂದು  ಹಣ ಮತ್ತು ಕಾಗದಪತ್ರ ತಂದುಕೊಡಿ ಎಂದು ಹೇಳಿದ್ದಾನೆ.

ಮೃತರ ಮಗನ ಮಾತಿಗೆ ಕೆ.ವಿ.ಶ್ರೀಧರ್ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು, ನಿನಗೆ ತಂದೆ ಶವ ಬೇಡ ಅವರ ದುಡ್ಡು ಮಾತ್ರ ಬೇಕು ಎಂದರೆ ಹೇಗೆ  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮಗನ ವರ್ತನೆಗೆ ಬೇಸತ್ತು ಕೊನೆಗೆ ಪಾಲಿಕೆ ಸಿಬ್ಬಂದಿಯೇ ಮೃತದೇಹ ಸಾಗಿಸಿದ್ದಾರೆ. ಬಂಧು-ಬಳಗ ಇದ್ದರೂ ಕೊರೊನಾ ಸೋಂಕಿತನ ಶವದ ಅವಸ್ಥೆ ಇದು.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement