ತನ್ನ ಮೃತ ತಾಯಿಯ ಅಚ್ಚಳಿಯದ ನೆನಪುಗಳ ಹೊತ್ತ ಮೊಬೈಲ್‌ಗಾಗಿ 9 ವರ್ಷದ ಕಂದಮ್ಮನ ಹೃದಯ ಮಿಡಿಯುವ ಮನವಿಗೆ ಪೊಲೀಸರಿಂದ ಹುಡುಕಾಟ..!

ಫೋನ್ ಹಿಂತಿರುಗಿಸಬೇಕೆಂದು ಹೃತಿಕ್ಷಾ ಮನವಿ ಮಾಡಿದ ಮನವಿಯನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಅನೇಕ ಬಳಕೆದಾರರು ಪೊಲೀಸರಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ

ಕೊಡಗು ಪೊಲೀಸರು ಕೋವಿಡ್ -19ರಿಂದ ಮೃತಪಟ್ಟ ಮಹಿಳೆಯ ಕಾಣೆಯಾದ ಮೊಬೈಲ್ ಫೋನ್‌ ಹುಡುಕಾಟ ಪ್ರಾರಂಭಿಸಿದ್ದಾರೆ,
ಅದು ಆ ಮಹಿಳೆಯ ಪುಟ್ಟ ಮಗಳಿಗಾಗಿ. ಸಂತ್ರಸ್ತೆಯ ಮಗಳು ತನ್ನ ತಾಯಿಯ ಫೋಟೋಗಳು ಮತ್ತು ನೆನಪುಗಳನ್ನು ಒಳಗೊಂಡಿರುವುದರಿಂದ ಫೋನ್ ಅನ್ನು ದಯವಿಟ್ಟು ತನಗೆ ಹಿಂದಿರುಗಿಸುವಂತೆ ಕೋರಿ ದೂರು ದಾಖಲಿಸಿದ ನಂತರ ಪೊಲೀಸರು ಆಸ್ಪತ್ರೆಯಲ್ಲಿ ಎಲ್ಲೋ ಕಳೆದುಹೋದ ಮೊಬೈಲ್‌ಗೆ ಹುಡುಕಾಟ ನಡೆಸಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲ್‌ನಗರದಲ್ಲಿ ದಿನಗೂಲಿ ಕೂಲಿ ಕಾರ್ಮಿಕರ 9 ವರ್ಷದ ಮಗಳು ಹೃತಿಕ್ಷಾ, ಮೇ 16 ರಂದು ಮಡಿಕೇರಿಯ ಕೋವಿಡ್‌ -19 ಆಸ್ಪತ್ರೆಯಲ್ಲಿ ಕೋವಿಡ್ -19 ಗೆ ತನ್ನ ತಾಯಿ ಪ್ರಭಾಳ ಅವರನ್ನು ಕಳೆದುಕೊಂಡರು. ಆದರೆ ತಾಯಿ ಫೋನ್‌ ಕಾಣೆಯಾಗಿತ್ತು. ಫೋನ್ ಹಿಂತಿರುಗಿಸಬೇಕೆಂದು ಹೃತಿಕ್ಷಾ ಮನವಿ ಮಾಡಿದ ಮನವಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಅನೇಕ ಬಳಕೆದಾರರು ತ್ವರಿತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಕೇಳಿಕೊಂಡಿದ್ದಾರೆ.
ನಾವು ಶನಿವಾರ (ಮೇ 15) ಅವಳನ್ನು ಕರೆ ಮಾಡಲು ಪ್ರಯತ್ನಿಸಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು ಮತ್ತು ಮರುದಿನ ಅವಳು (ಪ್ರಭಾ) ಮೃತಪಟ್ಟಿದ್ದಾಳೆಂದು ನಮಗೆ ತಿಳಿಸಲಾಯಿತು. ಫೋನ್ ಅನ್ನು ಮತ್ತೆ ಕೊಡುವಂತೆ ನಾವು ಕೇಳಿದೆವು ಆದರೆ ಆಸ್ಪತ್ರೆಯಿಂದ ಅದು ಕಾಣೆಯಾಗಿದೆ ಎಂದು ನಮಗೆ ತಿಳಿಸಲಾಯಿತು. ನಮಗೆ ಇನ್ನೂ ಮೊಬೈಲ್ ಹಿಂತಿರುಗಿಸಿಲ್ಲ “ಎಂದು ಹೃತಿಕ್ಷಾ ಅಳುತ್ತಾಳೆ.
ಪುಟ್ಟ ಬಾಲಿ ಹೃತಿಕ್ಷಾಗೆ ಅದು ಮಿಲಿಯನ್‌ ಡಾಲರರಗಳಿಗಿಂತ ಅದು ಮುಖ್ಯ ಯಾಕೆಂದರೆ ಆ ಮೊಬೈಲ್‌ನಲ್ಲಿ ಈ ಪುಟ್ಟ ಕಂದಮ್ಮನ ಮೃತ ತಾಯಿಯ ನೆನಪುಗಳಿದ್ದವು. ಆ ಮೊಬೈಲ್‌ ಫೋನ್‌ನಲ್ಲಿ ತನ್ನ ತಾಯಿಯ ಸಾಕಷ್ಟು ಫೋಟೋಗಳು ಇರುವುದರಿಂದ ಆ ಮೊಬೈಲ್ ಅನ್ನು ಸಿಕ್ಕಿದರು ಹಿಂತಿರುಗಿಸಿ ಎಂದು ಅವಳು ಪರಿಪರಿಯಾಗಿ ಕೇಳುತ್ತಿದ್ದಾಳೆ.
ಹೃತಿಕ್ಷಾ ಕುಶಾಲ್‌ನಗರದಲ್ಲಿ 4ನೇ ತರಗತಿ ವಿದ್ಯಾರ್ಥಿನಿ. ಆಕೆಯ ತಾಯಿ ಕೊರೊನಾದಿಂದ ಎರಡು ವಾರಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಮಡಿಕೇರಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಕೊಡಗು ಪೊಲೀಸರು ಈ ಪುಟ್ಟ ಕಂದಮ್ಮನ ದೂರು ದಾಖಲಿಸಿಕೊಂಡಿದ್ದಾರೆ ಮತ್ತು ಅವರು ಕಾಣೆಯಾದ ಫೋನಿಗಾಗಿ ಹುಡುಕುತ್ತಿದ್ದಾರೆ. ನಾವು ದೂರನ್ನು ಕೈಗೆತ್ತಿಕೊಂಡಿದ್ದೇವೆ ಮತ್ತು ಕಾಣೆಯಾದ ಫೋನ್ ಬಗ್ಗೆ ನಾವು ಆಸ್ಪತ್ರೆಯನ್ನು ಸಂಪರ್ಕಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಕೋವಿಡ್‌ -19 ಆಸ್ಪತ್ರೆ ಇರುವ ಮಡಿಕೇರಿಯಲ್ಲಿ ಹಾಗೂ ಕುಶಾಲ್‌ನಗರದಲ್ಲಿ ಪೊಲೀಸ್ ಅಧಿಕಾರಿಗಳು ಹೃತಿಕ್ಷಾಗೆ ಅತ್ಯಮೂಲ್ಯವಾದ ಈ ಫೋನ್ ಹುಡುಕಾಟ ನಡೆಸುತ್ತಿದ್ದಾರೆ. ನಾವು ಕುಟುಂಬವನ್ನು ಕುಶಾಲ್‌ನಗರದಲ್ಲಿ ಉಳಿಯುವಂತೆ ಕೇಳಿಕೊಂಡಿದ್ದೇವೆ ಮತ್ತು ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ತೆಗೆದುಕೊಂಡಿದ್ದೇವೆ. ನಾವು ಹೃತಿಕ್ಷಳಿಗಾಗಿ ಈ ಫೋನ್ ಅನ್ನು ಆದ್ಯತೆಯ ಮೇರೆಗೆ ಪತ್ತೆ ಮಾಡುತ್ತಿದ್ದೇವೆ ಎಂದು ಮಡಿಕೇರಿಯ ಪೊಲೀಸರು ತಿಳಿಸಿದ್ದಾರೆ. ಹೃತಿಕ್ಷಾಳ ಅಮ್ಮನ ನೆನಪಿನ ಬುತ್ತಿಯನ್ನು ಹೊತ್ತ ಆ ಮೊಬೈಲ್‌ ಪುನಃ ಹೃತಿಕ್ಷಾಗೆ ಸಿಗಲಿ ಎಂದು ಆಶಿಸಸೋಣ..

ಪ್ರಮುಖ ಸುದ್ದಿ :-   ಬಿಪಿಎಲ್‌ ಕಾರ್ಡ್ ಆದಾಯದ ಮಿತಿ 3 ಲಕ್ಷ ರೂ.ಗಳಿಗೆ ಹೆಚ್ಚಿಸಲು ಕ್ರಮ ; ಸಚಿವ ಮುನಿಯಪ್ಪ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement