ಭಾರತದಲ್ಲಿ ಕೊರೊನಾ ಸಾವಿನ ಪ್ರಕರಣಗಳಲ್ಲಿಯೂ ಸ್ವಲ್ಪ ಕುಸಿತ

ನವ ದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2,40,842 ಜನರಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದೇ ಸಮಯದಲ್ಲಿ 3,55,102 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ.ಇದೇ ವೇಳೆ ಕಳೆದ 24 ಗಂಟೆಯಲ್ಲಿ 3,741 ಜನ ಸೋಂಕಿತರು ಮೃತಪಟ್ಟಿದ್ದಾರೆ. ಮರಣದ ಪ್ರಮಾಣದಲ್ಲಿಯೂ ಸ್ವಲ್ಪ ಕುಸಿತ ಕಂಡಿದೆ. ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ ಗುಣಮುಖರದವರ ಸಂಖ್ಯೆ 2,34,25,467 ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 28,05,399 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಒಟ್ಟು 19,50,04,184 ಜನ ಲಸಿಕೆ ಪಡೆದಿದ್ದಾರೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ..| ಹಾರ್ದಿಕ್ ಪಾಂಡ್ಯ ಜೊತೆಗೆ ವಿಚ್ಛೇದನದ ವದಂತಿ ಬೆನ್ನಲ್ಲೇ ನಟನ ಜೊತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ ಪತ್ನಿ

ನಿಮ್ಮ ಕಾಮೆಂಟ್ ಬರೆಯಿರಿ

advertisement