ಇಗ್ನೋ ಕೋರ್ಸುಗಳ ಪ್ರವೇಶ ಆರಂಭ

ಧಾರವಾಡ: ಇಂಧಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ದೂರ ಶಿಕ್ಷಣದ ಕೋರ್ಸಗಳಿಗೆ ಜೂನ್ ೨೦೨೧ ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿದೆ.
ಪ್ರವೇಶಕ್ಕಾಗಿ ಧಾರವಾಡ ಜೆ.ಎಸ್.ಎಸ್. ಕಾಲೇಜಿನಲ್ಲಿರುವ ಇಗ್ನೋದ ಧಾರವಾಡ ಅಧ್ಯಯನ ಕೇಂದ್ರದಿಂದ ಮಾಹಿತಿ ಪಡೆಯಬಹುದಾಗಿದೆ. ಪ್ರವೇಶ ಪಡೆಯಲು ಕೊನೆಯ ದಿನಾಂಕ ಜುಲೈ ೩೦, ೨೦೨೧ ಆಗಿರುತ್ತದೆ ಹಾಗೂ ಮರು ನೋಂದಣಿಗಾಗಿ ೧೫ ಜೂನ್ ೨೦೨೧ ಕೊನೆಯ ದಿನಾಂಕವಾಗಿರುತ್ತದೆ.
ಇಗ್ನೋ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ, ಎಂಬಿಎ, ಎಂಸಿಎ, ಎಂ.ಕಾಂ, ಎಮ್.ಎ.(ಇಂಗ್ಲೀಷ್) ಎಮ್.ಎ.(ಇತಿಹಾಸ), ಎಮ್.ಎ.(ಅರ್ಥಶಾಸ್ತ್ರ) ಮುಂತಾದ ಸ್ನಾತಕೋತ್ತರ ಕೋರ್ಸಗಳು ಬಿಎ, ಬಿ.ಕಾಂ, ಬಿ.ಎಸ್ಸಿ, ಬಿಸಿಎ, ಬಿಲಿಬ್ ಸಾಯನ್ಸ್, ಬಿ.ಟಿ.ಎಸ್, ಮುಂತಾದ ಸ್ನಾತಕ ಕೋರ್ಸಗಳು ಡಿಇಸಿಇ, ಡಿಟಎಸ್, ಡಿಎನ್‌ಎಚ್‌ಇ ಮುಂತಾದ ಡಿಪ್ಲೋಮ ಕೊರ್ಸಗಳು, ಪಿಜಿಡಿಎಚ್‌ಇ, ಪಿಜಿಡಿಆರ್‌ಡಿ, ಪಿಜಿಸಿಇಡಿಎಸ್, ಪಿಜಿಡಿಇಡಿಎಸ್, ಪಿಜಿಡಿಇಎಸ್‌ಡಿ, ಪಿಜಿಡಿಇಎಸ್‌ಡಿ, ಪಿಜಿಡಿಎಲ್‌ಎಎನ್, ಮುಂತಾದ ಪಿಜಿ ಡಿಪ್ಲೋಮ ಕೋರ್ಸಗಳು, ಸಿಟಿಪಿಎಮ್, ಸಿಡಿಎಮ್, ಸಿಇಎಸ್, ಸಿಎಫ್‌ಎನ್, ಸಿಐಜಿ,ಸಿಆರ್‌ಡಿ ಮುಂತಾದ ಸರ್ಟಿಪಿಕೇಟ್ ಕೋರ್ಸಗಳು ಅಧ್ಯಯನಕ್ಕೆ ಲಭ್ಯ ಇದೆ. ಇಗ್ನೋ ಜೆ.ಎಸ.ಎಸ್.ಅಧ್ಯಯನ ಕೇಂದ್ರದಲ್ಲಿ ಸುಮಾರು ೩೮ ವಿವಿಧ ಕೊರ್ಸಗಳು ಅಧ್ಯಯನಕ್ಕೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಇಗ್ನೋ ಧಾರವಾಡ ಜೆ.ಎಸ್.ಎಸ್. ಅಧ್ಯಯನ ಕೇಂದ್ರ ವಿದ್ಯಾಗಿರಿ, ಧಾರವಾಡ, ಇವರ ದೂರವಾಣಿ : ೦೮೩೬-೨೪೬೮೯೯೯, ೯೮೪೫೩೦೪೮೧೧, ೮೯೫೧೮೭೧೪೮೧, ೮೦೯೫೦೪೨೯೮೬ ಸಂರ್ಪಕಿಸಬಹುದು ಪ್ರವೇಶ ಆನ್ ಲೈನ ಮೂಲಕ ಇದ್ದು www.ignou.ac.in ಎಂದು ಧಾರವಾಡ ಇಗ್ನೋ ಅಧ್ಯಯನ ಕೇಂದ್ರ ಸಂಯೋಜಕರು ಸೂರಜ್ ಜೈನ್ ತಿಳಿಸಿದ್ದಾರೆ

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement