ಕನ್ನಡದ ಖ್ಯಾತ ಪೋಷಕ ನಟ ಕೃಷ್ಣೇ ಗೌಡ ನಿಧನ

ಬೆಂಗಳೂರು: ಕನ್ನಡದ ಹಿರಿಯ ನಟ, ರಂಗಭೂಮಿ ಕಲಾವಿದ ಕೃಷ್ಣೇಗೌಡ (80 ವರ್ಷ) ನಿಧನರಾಗಿದ್ದಾರೆ.
ಕೃಷ್ಣೇಗೌಡ ಅವರು 20 ದಿನಗಳ‌ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕೋವಿಡ್​ ಟೆಸ್ಟ್​ ನೆಗೆಟಿವ್​ ಸಹ ಬಂದಿದ್ದರಿಂದ ಅವರನ್ನು ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಗುಣಮುಖರಾಗಿ ಮನೆಗೆ ಮರಳಿದ ನಂತರವೂ ಕೃಷ್ಣೇಗೌಡ ಅವರಿಗೆ ಶ್ವಾಸಕೋಶದ ಸಮಸ್ಯೆ ಮತ್ತೆ ಕಾಣಿಸಿಕೊಂಡಿತ್ತು .ಆದರೆ ಶ್ವಾಸಕೋಶದಲ್ಲಿ ಹೆಚ್ಚು ಇನ್ಫೆಕ್ಷನ್ ಕಾಣಿಸಿಕೊಂಡಿದ್ದ ಕಾರಣ ಕೃಷ್ಣಗೌಡರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅವರು ಮಂಗಳವಾರ ಬೆಳಿಗ್ಗೆ ಹೃದಾಘಾತದಿಂದ ನಿಧನರಾಗಿದ್ದಾರೆ.

ಕನ್ನಡದ ಸಿನೆಮಾಗಳಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಕೃಷ್ಣೆ ಗೌಡ ಅವರು ಧಾರಾವಾಹಿಗಳಲ್ಲಿಯೂ ಹೆಸರು ಮಾಡಿದ್ದರು. ರಂಗಭೂಮಿ ಹಿನ್ನಲೆ ಹೊಂದಿರುವ ಕೃಷ್ಣೇಗೌಡ ಅವರು ಸಾಕಷ್ಟು ನಾಟಕಗಳಲ್ಲೂ ಬಣ್ಣ ಹಚ್ಚಿದ್ದಾರೆ. ಮುಖ್ಯಮಂತ್ರಿ’ ನಾಟಕದ ಕಾಯಂ ಕಲಾವಿದರಾಗಿದ್ದ ಬಿ. ಎಂ ಕೃಷ್ಣೇಗೌಡರು  ರಾಜ್ಯದ ಅಕೌಂಟೆಂಟ್​ ಜನರಲ್​ ಕಚೇರಿಯಲ್ಲಿ ಕೆಲಸ ಮಾಡುತ್ತಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸಿನಿರಂಗದಲ್ಲಿ ಪೋಷಕರ ಪಾತ್ರಗಳಲ್ಲಿ ಅನೇಕ ಸಿನೆಮಾಗಳಲ್ಲಿ ಇವರು ಪೋಷಕ ನಟನಾಗಿ, ಖಳನಾಯಕನಾಗಿ ಪಾತ್ರ ಮಾಡಿದ್ದರು. ಇವರ ನಟನೆಗೆ ರಾಜ್ಯ ಪ್ರಶಸ್ತಿ ಸಹ ಸಿಕ್ಕಿದೆ. ಬಣ್ಣದ ಲೋಕದ ಜತೆಗೆ ಕ್ರೀಡಾ ಕ್ಷೇತ್ರದಲ್ಲೂ ಹೆಸರು ಮಾಡಿದ್ದ ಇವರು ರಾಜ್ಯ ಮಟ್ಟದ ವಾಲಿಬಾಲ್​ ಆಟಗಾರರಾಗಿದ್ದರು.
ಶಂಖನಾದ ಅರವಿಂದ್​, ರೇಣುಕಾ ಶರ್ಮಾ, ರಾಮು, ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ರಾಜಾರಾಂ,ಸೇರಿದಂತೆ ಹಲವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.ಹಿರಿಯ ನಟ ಬಿ.ಎಂ.ಕೃಷ್ಣೇಗೌಡ ಅಗಲಿಕೆಗೆ ಕನ್ನಡ ಚಿತ್ರರಂಗದ ಗಣ್ಯರು, ನಟ-ನಟಿಯರು ಸಂತಾಪ ಸೂಚಿಸಿದ್ದಾರೆ..

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement