ನಿರೀಕ್ಷಣಾ ಜಾಮೀನಿಗೆ ಸಾಂಕ್ರಾಮಿಕ ರೋಗ ಆಧಾರವಲ್ಲ: ಅಲಹಾಬಾದ್ ಹೈಕೋರ್ಟ್ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ತಡೆ

ನವ ದೆಹಲಿ: ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಸಾಂಕ್ರಾಮಿಕ ರೋಗ ಆಧಾರವಾಗುವುದಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್‌ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತಡೆ ನೀಡಿದೆ.

ವಂಚನೆ ಪ್ರಕರಣದ ಆರೋಪ ಎದುರಿಸುತ್ತಿದ್ದ ಆರೋಪಿಯೊಬ್ಬರಿಗೆ ಅಲ್ಲಹಾಬಾದ್ ಹೈಕೋರ್ಟ್ ಕೋವಿಡ್-19 ಸೋಂಕಿನಿಂದ ಸಾವು ಸಂಭವಿಸಬಹುದು ಎಂಬ ಭೀತಿಯ ಆಧಾರದಲ್ಲಿ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಆದೇಶ ನೀಡಿ, ಕೋವಿಡ್-19 ಸೋಂಕು ನಿರೀಕ್ಷಣಾ ಜಾಮೀನು ಪಡೆಯುವುದಕ್ಕೆ ಆಧಾರ ಎಂದು ಉಲ್ಲೇಖಿಸಿತ್ತು.
ಆದರೆ ಸುಪ್ರೀಂ ಕೋರ್ಟ್ ನ್ಯಾ.ವಿನೀತ್ ಶರಣ್, ಬಿ.ಆರ್ ಗವಾಯಿ ಅವರಿದ್ದ ರಜೆ ಪೀಠ, ಅಲಹಾಬಾದ್ ಹೈಕೋರ್ಟ್ ಮೇ 10 ರಂದು ನೀಡಿದ್ದ ಆದೇಶಕ್ಕೆ ತಡೆ ನೀಡಿದ್ದು, ಕೋರ್ಟ್ ಗಳು ಇದನ್ನು ಪರಿಗಣಿಸಬಾರದೆಂದು ಸೂಚಿಸಿದೆ.
ಪ್ರತಿ ಪ್ರಕರಣದ ವಿವರಗಳನ್ನು ಪರಿಗಣಿಸಬೇಕಾಗುತ್ತದೆ. ಜೊತೆಗೆ ಕೋವಿಡ್-19 ನಿರೀಕ್ಷಣಾ ಜಮೀನು ನೀಡುವುದಕ್ಕೆ ಆಧಾರವಾಗಿಸಿಕೊಳ್ಳಬಹುದೇ? ಎಂಬುದರ ಬಗ್ಗೆ ಸಲಹೆ ನೀಡುವುದಕ್ಕೆ ಹಿರಿಯ ಅಡ್ವೊಕೇಟ್ ವಿ ಗಿರಿ ಅವರನ್ನು ಸುಪ್ರೀಂ ಕೋರ್ಟ್ ನೇಮಕ ಮಾಡಿದೆ.
ಮೇ 10 ರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement