ಪರಾರಿಯಾಗಿದ್ದ ಉದ್ಯಮಿ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಬಂಧನ

13,500 ಕೋಟಿ ರೂ.ಗಳ ಬಹುಕೋಟಿ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ (ಪಿಎನ್‌ಬಿ) ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸದ್ಯ ಭಾರತದಿಂದ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಅವರನ್ನು ಡೊಮಿನಿಕಾದಲ್ಲಿ ಪತ್ತೆ ಹಚ್ಚಿ ಅಲ್ಲಿನ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಅವರು ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಕೆಲವು ದಿನಗಳಿದ್ದು ಅಲ್ಲಿಂದ ಪರಾರಿಯಾಗಿದ್ದರು.
ಡೊಮಿನಿಕಾ ಕೆರಿಬಿಯನ್ ಸಮುದ್ರದಲ್ಲಿರುವ ಒಂದು ಸಣ್ಣ ದ್ವೀಪ ರಾಷ್ಟ್ರ. ಆಂಟಿಗುವಾ ಪೊಲೀಸರು ಕಸ್ಟಡಿ ಪಡೆಯಲು ಡೊಮಿನಿಕಾದ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಇಂಟರ್ಪೋಲ್ ‘ಹಳದಿ ಕಾರ್ನರ್’ ನೋಟಿಸ್ ನೀಡಿದ ನಂತರ ಮೆಹುಲ್ ಚೋಕ್ಸಿಯನ್ನು ಡೊಮಿನಿಕಾದಲ್ಲಿ ಪತ್ತೆ ಮಾಡಲಾಗಿದೆ.

ಮೆಹುಲ್ ಚೋಕ್ಸಿ ಭಾರತಕ್ಕೆ ಯಾಕೆ ಬೇಕು?
ಮೆಹುಲ್ ಚೋಕ್ಸಿ ಅವರು 2018 ರ ಜನವರಿಯಿಂದ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ತಂಗಿದ್ದರು. ಅವರು ಮತ್ತು ಅವರ ಸೋದರಳಿಯ ನೀರವ್ ಮೋದಿ ಅವರು 13,500 ಕೋಟಿ ರೂ.ಗ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ (ಪಿಎನ್‌ಬಿ) ಹಗರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ.
ಹಾಲಿ ಲಂಡನ್‌ ಜೈಲಿನಲ್ಲಿರುವ ನೀರವ್ ಮೋದಿಗೆ ಬ್ರಿಟನ್‌ ಕೋರ್ಟ್‌ ಪದೇ ಪದೇ ಜಾಮೀನು ನಿರಾಕರಿಸಿದ ನಂತರ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ, ಮೆಹುಲ್ ಚೋಕ್ಸಿ ಅವರು 2017 ರ ಜನವರಿ ಮೊದಲ ವಾರದಲ್ಲಿ ಭಾರತದಿಂದ ಪಲಾಯನ ಮಾಡುವ ಮೊದಲು ಸಿಟಿಜನ್ಶಿಪ್ ಬೈ ಇನ್ವೆಸ್ಟ್ಮೆಂಟ್ ಕಾರ್ಯಕ್ರಮವನ್ನು ಬಳಸಿಕೊಂಡು ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವವನ್ನು ಪಡೆದರು.ಹಗರಣವು ನಂತರ ಬೆಳಕಿಗೆ ಬಂದಿತು. ಇಬ್ಬರೂ ಸಿಬಿಐ ತನಿಖೆಯನ್ನು ಎದುರಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

ಆಂಟಿಗುವಾ ಮತ್ತು ಬಾರ್ಬುಡಾದಲ್ಲಿನ ಬೆಳವಣಿಗೆಗಳು..
ಆಂಟಿಗುವಾ ಮತ್ತು ಬಾರ್ಬುಡಾದ ಸಂಸತ್ತಿಗೆ ನೀಡಿದ ಹೇಳಿಕೆಯಲ್ಲಿ, ಪ್ರಧಾನಿ ಗ್ಯಾಸ್ಟನ್ ಬ್ರೌನ್, ಮೆಹುಲ್ ಚೋಕ್ಸಿಯನ್ನು ಪತ್ತೆ ಹಚ್ಚಲು ಅಧಿಕಾರಿಗಳು ಭಾರತ ಸರ್ಕಾರ, ನೆರೆಯ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಪೊಲೀಸ್ ಸಂಘಟನೆಯೊಂದಿಗೆ “ಸಹಕರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಆಂಟಿಗುವಾ ಮತ್ತು ಬಾರ್ಬುಡಾದ ರಾಯಲ್ ಪೋಲಿಸ್ ಫೋರ್ಸ್ ಆ ನಿಟ್ಟಿನಲ್ಲಿ ಒಂದು ಹೇಳಿಕೆ ನೀಡಿದ್ದು. ಆ ಹೇಳಿಕೆಯನ್ನು ಇಂಟರ್ಪೋಲ್ನೊಂದಿಗೆ ಹಂಚಿಕೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ.
ಮೆಹುಲ್ ಚೋಕ್ಸಿ ಅವರು ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಎರಡು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಒಂದರಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಮತ್ತು ಇನ್ನೊಂದರಲ್ಲಿ ಅವರ ಪೌರತ್ವ ಹಿಂತೆಗೆದುಕೊಳ್ಳುವ ಬಗ್ಗೆ ನಡೆಯುತ್ತಿದೆ.
ಈ ಪ್ರಕರಣಗಳಲ್ಲಿ ಅವರನ್ನು ಪ್ರತಿನಿಧಿಸಲು ಅವರು ಬ್ರಿಟನ್‌ನಿಂದ ಪ್ರಸಿದ್ಧ ವಕೀಲರನ್ನು ಕರೆತಂದಿದ್ದಾರೆ.
ಮೆಹುಲ್ ಚೋಕ್ಸಿ ಅವರನ್ನು ಕೊನೆಯ ಬಾರಿಗೆ ಭಾನುವಾರ ಅವರ ಕಾರಿನಲ್ಲಿ ನೋಡಲಾಗಿದೆ ಎಂದು ವರದಿಗಳು ತಿಳಿಸಿವೆ. ಶೋಧದ ನಂತರ ಪೊಲೀಸರು ವಾಹನವನ್ನು ವಶಪಡಿಸಿಕೊಂಡರು ಆದರೆ ಚೋಕ್ಸಿ ಪತ್ತೆಯಾಗಿರಲಿಲ್ಲ.
ಮೆಹುಲ್ ಚೋಕ್ಸಿ ಹಠಾತ್ ನಾಪತ್ತೆಯಾದ ಸುದ್ದಿಯ ನಂತರ, ಅವರ ವಿರುದ್ಧದ ಆರೋಪಗಳನ್ನು ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ದಳವು ಇಂಟರ್ಪೋಲ್ ಸೇರಿದಂತೆ ಔಪಚಾರಿಕ ಮತ್ತು ಅನೌಪಚಾರಿಕ” ಚಾನೆಲ್ಲುಗಳ ಮೂಲಕ ವರದಿಗಳನ್ನು ಪರಿಶೀಲಿಸುತ್ತಿದೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement