ಯುಕೆ ಟಿವಿ ಸುದ್ದಿವಾಹಿನಿ ಮಾಲಕ ರಾಜೇಶ ನಾಯ್ಕ ಕೊರೊನಾದಿಂದ ಸಾವು

ಕುಮಟಾ: ಯುಕೆ ಟಿವಿ ಸುದ್ದಿವಾಹಿನಿಯ  ಮಾಲೀಕರಾಗಿದ್ದ ರಾಜೇಶ ನಾಯ್ಕ(40) ಕೊರೊನಾ ಸೋಂಕಿನಿಂದ ಗುರುವಾರ ನಿಧನರಾದರು.
ಕುಮಟಾದ  ಸರಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕೊರೋನಾ ತೀವ್ರತೆ ಹೆಚ್ಚಾಗಿದ್ದರಿಂದ ಕಾರವಾರದ ಸರಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.ಅಲ್ಲಿನ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ನಿಧನರಾದರು.
ಡಿಸ್ಟೆನ್ಸ್ ಎಜುಕೇಶನ್ ಎಂಬ ಸಂಸ್ಥೆಯನ್ನು ಅವರು ನಡೆಸುತ್ತಿದ್ದರು. ಕುಮಟಾದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಅರೆಕಾಲಿಕ ಉಪನ್ಯಾಸಕ ರಾಗಿಯು ಸೇವೆಸಲ್ಲಿಸುತ್ತಿದ್ದರು. ಡಿಸ್ಟೆನ್ಸ್ ಎಜುಕೇಶನ್ ಮೂಲಕ ಅನೇಕರ ಬಾಳಿಗೆ ಬೆಳಕಾಗಿದ್ದ ರಾಜೇಶ್ ನಾಯ್ಕ್ ಅವರ ನಿಧನಕ್ಕೆ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದ ಶೆಟ್ಟಿ. ಪತ್ರಿಕಾ ಸಂಘದ ಅಧ್ಯಕ್ಷರಾದ ಸುಬ್ರಾಯ ಭಟ್ಟ ಕೂಜಳ್ಳಿ. ಸಿಂಚನ ವಾಹಿನಿಯ ಮುಖ್ಯಸ್ಥರಾದ ಕೃಷ್ಣಾ ನಂದ ಭಟ್ಟ, ಬಿಜೆಪಿ ಮುಖಂಡ ವಿನೋದ್ ಪ್ರಭು. ಜೆಡಿಎಸ್‌ ಪಕ್ಷದ ಸೂರಜ ನಾಯ್ಕ್ ಸೋನಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement