ಕಾಗಲ್‌, ಅಘನಾಶಿನಿ ಗ್ರಾಮದಲ್ಲಿ ಭಾರೀ ಸುಂಟರಗಾಳಿ, ದೃಶ್ಯ ವಿಡಿಯೋದಲ್ಲಿ ಸೆರೆ

ಕುಮಟಾ; ಸುಂಟರಗಾಳಿ (ಟೊರ್ನಾಡೊ) ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಲ್ ಹಾಗೂ ಅಘನಾಶಿನಿ ಭಾಗದಲ್ಲಿ ಶುಕ್ರವಾರ ಸಂಜೆ ಕಾಣಿಸಿಕೊಂಡಿದೆ.
ಸಾಮಾನ್ಯವಾಗಿ ಇಂತಹ ಅಪಾಯ ಕಾರಿ ಸುಂಟರಗಾಳಿ ಅಮೆರಿಕದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ, ಆದರೆ ಕರ್ನಾಟಕದ ಕರಾವಳಿ ತೀರದಲ್ಲಿ ಇಂತಹ ತೀವ್ರ ಗಾಳಿ ಕಾಣಿಸಿಕೊಳ್ಳುವುದು ತೀರ ಅಪರೂಪ.

ಆದರೆ ಇದೇ ಮೊದಲ ಬಾರಿ ಇಂತಹ ಸುಳಿಗಾಳಿ ಕಾಣಿಸಿಕೊಂಡಿದೆ. ಗಾಳಿಯ ತೀವ್ರತೆ ದೂರದಿಂದಲೇ ನೋಡಿ   ಮಹಾಲಕ್ಷ್ಮಿ ಗೌಡ ಎಂಬವರ ಮನೆಯವರು ಓಡಿ ಹೋಗಿ ಬಚಾವಾಗಿದ್ದಾರೆ. ಕಾಗಲ್ ಅಘನಾಶನಿ ಜನವಸತಿ ಇಲ್ಲದ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದರಿಂದ ಯಾರಿಗೂ ಅಪಾಯ ವಾಗಲಿಲ್ಲ.

ಈ ಸುಂಟರಗಾಳಿ ಜನವಸತಿ ಪ್ರದೇಶದಲ್ಲಿ ಆಗಿದ್ದರೆ ಹಾನಿ ಸಾಧ್ಯತೆ ಹೆಚ್ಚಾಗಬಹುದಿತ್ತು. ತೌಕ್ತೇ ಚಂಡಮಾರುತದ ಕಾರಣದಿಂದ ನಂತರ ಉಂಟಾದ ಬದಲಾವಣೆಯಿಂದ ಸಮುದ್ರ ತೀರದಲ್ಲಿ ಟೊರ್ನಾಡೊ ಸುಂಟರಗಾಳಿಗಾಳಿಗೆ ಕಾರಣ ವಾಗಿರಬಹುದು ಎಂದು ಹೇಳಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement