ಕೆಪಿಸಿಸಿ ಕೋವಿಡ್ 19 ಸಹಾಯ ಕಾರ್ಯಕ್ರಮ ಅನುಷ್ಠಾನ ಮೇಲುಸ್ತುವಾರಿ ಸಮಿತಿಗೆ ಸದಾನಂದ ಡಂಗನವರ ನೇಮಕ

ಹುಬ್ಬಳ್ಳಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕೋವಿಡ್ -19 ಸಹಾಯ ಕಾರ್ಯಕ್ರಮಗಳ ಅನುಷ್ಠಾನ ಮೇಲುಸ್ತುವಾರಿ ಸಮಿತಿಯನ್ನು ರಚನೆ ಮಾಡಿದೆ. ಇದರಲ್ಲಿ ಒಟ್ಟು 22 ಸದಸ್ಯರಿದ್ದಾರೆ. ಧಾರವಾಡ ಜಿಲ್ಲೆಯಿಂದ ಕರ್ನಾಟಕ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಸೇರಿದಂತೆ ಈ ವಿವಿಧ ಜಿಲ್ಲೆಗಳ ಕೋವಿಡ್ -19 ಸಹಾಯ ಕಾರ್ಯಕ್ರಮಗಳ ಅನುಷ್ಠಾನ ಮೇಲುಸ್ತುವಾರಿ ಸಮಿತಿಗೆ ಒಟ್ಟು 22 ಜನರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ ಶಿವಕುಮಾರ ನೇಮಕ ಮಾಡಿದ್ದಾರೆ. ರಾಜ್ಯಸಭಾ ಸದಸ್ಯ ಎಲ್‌ ಹನುಮಂತಯ್ಯ ಅವರನ್ನು ಮುಖ್ಯ ಸಮನ್ವಯಕಾರ ಹಾಗೂ ಮಾಜಿ ಸಚಿವ ಪ್ರಯಾಂಕ ಖರ್ಗೆ ಅವರನ್ನು ಸಮನ್ವಯಕಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

5 / 5. 3

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement