ನವ ದೆಹಲಿ: ಡೊಮಿನಿಕಾದಲ್ಲಿ ಬಂಧನಕ್ಕೊಳಗಾಗಿರುವ ಬಹುಕೋಟಿ ಪಿಎನ್ಬಿ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿಯನ್ನು ಮುಂದಿನ ಆದೇಶದ ವರೆಗೆ ಕೆರಿಬಿಯನ್ ದ್ವೀಪರಾಷ್ಟ್ರದಿಂದ ಹೊರ ಕಳುಹಿಸಬಾರದು ಎಂದು ಅಲ್ಲಿನ ಹೈಕೋರ್ಟ್ ಆದೇಶ ಹೊರಡಿಸಿದೆ.
ದೇಶಕ್ಕೆ ಅಕ್ರಮ ಪ್ರವೇಶ್ ಆರೋಪದಲ್ಲಿ ಡೊಮಿನಿಕಾದಲ್ಲಿ ಬಂಧನಕ್ಕೊಳಗಾಗಿರುವ ಚೋಕ್ಸಿಯನ್ನು ದೇಶದಿಂದ ಹೊರ ಕಳುಹಿಸಬಾರದು ಎಂದು ಅವರ ಪರ ವಕೀಲರು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಡೊಮಿನಿಕಾ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಅಕ್ರಮವಾಗಿ ಡೊಮಿನಿಕಾ ಪ್ರವೇಶಿಸಿರುವ ಚೋಕ್ಸಿ ಅವರಿಗೆ ಕಾನೂನು ನೆರವು ನೀಡುವುದು ಸಾಂವಿಧಾನಿಕ. ಹಕ್ಕು ಹೀಗಾಗಿ ಡೊಮಿನಿಕಾ ನ್ಯಾಯಾಲಯದಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ ಎಂದು ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ ತಿಳಿಸಿದ್ದಾರೆ.
ಹೀಗಾಗಿ 13,500ಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕಾರ್ಯ ಮತ್ತಷ್ಟು ವಿಳಂಭವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ