ಕುಸ್ತಿಪಟು ಕೊಲೆ ಪ್ರಕರಣ: ಮತ್ತೆ ನಾಲ್ಕು ದಿನ ಸುಶೀಲ್ ಕುಮಾರ್ ಪೊಲೀಸ್ ಕಸ್ಟಡಿ ವಿಸ್ತರಣೆ

ನವ ದೆಹಲಿ: ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಅವರಿಗೆ ಶನಿವಾರ ನ್ಯಾಯಾಲಯವು ಕುಮಾರ್ ಅವರನ್ನು ಮತ್ತೆ 4 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ದಿಲ್ಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ 23 ವರ್ಷದ ಕುಸ್ತಿಪಟು ಸಾಗರ ರಾಣಾ ಕೊಲೆಯ ಪ್ರಕರಣದಲ್ಲಿ ಕಳೆದ ವಾರ ದಿಲ್ಲಿ ಪೊಲೀಸರು ಸುಶೀಲಕುಮಾರ್ ನನ್ನು ಸಹ ಆರೋಪಿ ಅಜಯ್ ಜೊತೆಗೆ ದಿಲ್ಲಿಯ ಮುಂಡ್ಕಾ ಪ್ರದೇಶದಲ್ಲಿ ಬಂಧಿಸಿದ್ದರು.
ಈ ಮೊದಲು ಕುಸ್ತಿಪಟುವನ್ನು ಆರು ದಿನಗಳ ಪೊಲೀಸ್ ಕಸ್ಟಡಿಯಲ್ಲಿ ಕಳುಹಿಸಲಾಗಿತ್ತು. ಶನಿವಾರ ಮತ್ತೆ ನಾಲ್ಕು ದಿನಗಳ ಕಸ್ಟಡಿಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಸುಶೀಲ್ ಕುಮಾರ್ ಹಾಗೂ ಅಜಯ್ ಅವರು ಪೊಲೀಸರೊಂದಿಗೆ ಸಹಕರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಏಳು ದಿನಗಳ ಕಸ್ಟಡಿ ಕೇಳಿದ್ದರು.
ಸುಮಾರು 18-20 ಜನರು ಈ ಕ್ರೂರ ದಾಳಿಯಲ್ಲಿ ಭಾಗಿಯಾಗಿದ್ದಾರೆ . ಸುಶೀಲ್ ಕುಮಾರ್ ಅವರ ಮೊಬೈಲ್ ಫೋನ್ ಇನ್ನೂ ಪತ್ತೆಯಾಗಿಲ್ಲ ಆದರೆ ಇಬ್ಬರೂ ಆರೋಪಿಗಳಿಗೆ ಸೇರಿದ ಏಳು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯ ಸಮಯದಲ್ಲಿ ಆರೋಪಿ ಧರಿಸಿದ್ದ ಬಟ್ಟೆಗಳು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸುಶೀಲ್ ಕುಮಾರ್ ಕುಸ್ತಿಪಟುವನ್ನು ಥಳಿಸುತ್ತಿರುವ ವೀಡಿಯೊವನ್ನು ಪೊಲೀಸರು ಈ ಹಿಂದೆ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಎರಡು ದಿನಗಳ ಹಿಂದೆ ಕುಸ್ತಿಪಟು ಕೋಲಿನಿಂದ ಹಲ್ಲೆ ಮಾಡಿದ ಚಿತ್ರ ಹೊರಬಿದ್ದಿದ್ದವು.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement