ಕೋವಿಡ್‌-19ನಿಂದ ರಕ್ಷಣೆಯ ಪ್ರಯಾಣಕ್ಕೆ ಬೈಕನ್ನು ಬಬಲ್ ಆಗಿ ಪರಿವರ್ತಿಸಿದ ದೇಸೀ ಪ್ರತಿಭೆ..!

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ವಿರುದ್ಧ ಭಾರತ ಹೋರಾಡುತ್ತಿರುವಾಗ, ಗ್ರಾಮೀಣ ಪ್ರದೇಶದ ಅನೇಕರು ಸುರಕ್ಷಿತವಾಗಿರಲು ಮತ್ತು ರೋಗದಿಂದ ಬಚೌಾಗಲು ತಮ್ಮದೇ ಆದ ನವೀನ ಪರಿಹಾರಗಳನ್ನುಕಂಡುಕೊಳ್ಳುತ್ತಿದ್ದಾರೆ.
ಸುರಕ್ಷಿತವಾಗಿರಲು ಅಂತಹ ಒಂದು ‘ದೇಸಿ ಆವಿಷ್ಕಾರ’ ವೈರಲ್ ಆಗುತ್ತಿದೆ, ಇಲ್ಲಿ ಒಬ್ಬ ವ್ಯಕ್ತಿಯು ತನ್ನ ಬೈಕನ್ನು ಕೋವಿಡ್‌-19 ನಿಂದ ರಕ್ಷಿಸಿಕೊಳ್ಳಲು ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಸಾಗಿಸಲು ಸಹಾಯ ಮಾಡಲು ತನ್ನ ಬೈಕನ್ನು ‘ಬಬಲ್ ಸೇವೆ’ ಆಗಿ ಪರಿವರ್ತಿಸಿದನು.

ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಆ ವ್ಯಕ್ತಿ ತನ್ನ ‘ಬಬಲ್ ಬೈಕ್’ ಓಡಿಸುತ್ತಿರುವುದನ್ನು ತೋರಿಸಲಾಗಿದೆ. ಮನುಷ್ಯನ ಬೈಕ್‌ನಲ್ಲಿ ಕಬ್ಬಿಣದ ಸರಳುಗಳ ತಾತ್ಕಾಲಿಕವಾಗಿ ರಚನೆ ಇದ್ದು, ಅದರ ಮೇಲೆ ಪ್ಲಾಸ್ಟಿಕ್ ಹಾಳೆಗಳನ್ನು ಕಟ್ಟಲಾಗಿದೆ ಎಂದು ವಿಡಿಯೊ ತೋರಿಸಿದೆ.
ಇದು ಮಾತ್ರವಲ್ಲ, ಪಿಲಿಯನ್ ಸವಾರಿ ಮಾಡುವ ವ್ಯಕ್ತಿಯು ಬೈಕ್‌ನ ಕೊನೆಯಲ್ಲಿ ಜೋಡಿಸಲಾದ ಕುರ್ಚಿಯ ಮೇಲೆ ಚಾಲಕರಿಂದ ಸಾಮಾಜಿಕ ಅಂತರದ ತೋಳಿನಷ್ಟು ದೂರದಲ್ಲಿ ಕುಳಿತಿದ್ದ. ಅದರಲ್ಲಿ ಅವರು ಸವಾರಿ ಮಾಡುತ್ತಾರೆ. ಹಾಗೂ ಬೇರೆಯವರನ್ನೂ ಬಬಲ್‌ ಬೈಕಿನಲ್ಲಿ ಒಯ್ಯಬಹುದು. ಇದು ಈಗ ಈ ಐಡಿಯಾ ಈಗ ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.ಅಲ್ಲದೆ ನೆಟ್ಟಿಗರು ಇದಕ್ಕೆ ಆತ್ಮ ನಿರ್ಭರ ಭಾರತ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊಗಳು | ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ; ಬೆಳ್ಳಿ ಅಂಬಾರಿ ಕೆಳಕ್ಕೆ, ವಾಹನ ಜಖಂ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement