ದಕ್ಷಿಣ ಆಫ್ರಿಕಾದ ಅತ್ಯಾಚಾರಿಗೆ 1,088 ವರ್ಷಗಳ ಜೈಲು ಶಿಕ್ಷೆ…!

. ಅತ್ಯಾಚಾರದಂತ ಪೈಶಾಚಿಕ ಕೃತ್ಯಗಳಿಗೆ ಕೋರ್ಟ್​​​  ಬಹುಶಃ ಸಾರ್ವಕಾಲಿಕ ದಾಖಲೆಯ ತೀರ್ಪು ನೀಡಿದೆ. ಮನೆಗಳಿಗೆ ನುಗ್ಗಿ ಅಮಾಯಕ ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಿದ್ದ ಕಾಮುಕನಿಗೆ ಅಲ್ಲಿನ ಬರೋಬ್ಬರಿ ಒಂದು ಸಾವಿರ ವರ್ಷ ಜೈಲು ಶಿಕ್ಷೆ ವಿಧಿಸಿದೆ. ದೊಡ್ಡ ಪ್ರಮಾಣದ ಶಿಕ್ಷೆ ನೀಡುವ ಮೂಲಕ ಅತ್ಯಾಚಾರದ ವಿರುದ್ಧ ಕಠಿಣ ನಿಲುವನ್ನು ಕೋರ್ಟ್​​ ತಳೆದಿದೆ.
ದಕ್ಷಿಣ ಆಫ್ರಿಕಾದ ಕೋರ್ಟ್​​​ಕಠಿಣ ಶಿಕ್ಷೆಯ ಮೂಲಕ ವಿಶ್ವದ ಗಮನ ಸೆಳೆದಿದೆ. ಸರಣಿ ಅತ್ಯಾಚಾರಿ 33 ವರ್ಷದ ಸೆಲ್ಲೋ ಅಬ್ರಾಂ ಮಪುನ್ಯಾಗೆ ಕೋರ್ಟ್‌ 1,088 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಸೆಲ್ಲೋ ಹಲವು ವರ್ಷಗಳಿಂದ ಮನೆಗಳಿಗೆ ನುಗ್ಗಿ ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಿದ್ದ. ಸರಣಿ ರೇಪಿಸ್ಟ್​​​ನಿಂದ ಮಹಿಳೆಯರು ಒಂಟಿಯಾಗಿ ಮನೆಗಳಲ್ಲಿ ಇರಲು ಹೆದರುತ್ತಿದ್ದರು. 35 ಯುವತಿಯರು, ಮಹಿಳೆಯರ ಮೇಲೆ ಸೆಲ್ಲೋ ಅತ್ಯಾಚಾರವೆಸಗಿರುವುದು ಸಾಬೀತಾಗಿದೆ. ಮನೆಗೆ ನುಗ್ಗಿ ರೇಪ್​ ಮಾಡುತ್ತಿದ್ದ ಕಾಮುಕ ನಂತರ ಮನೆಗಳಲ್ಲಿದ್ದ ಹಣ-ಆಭರಣ, ವಸ್ತುಗಳನ್ನು ಕದ್ದೊಯ್ಯುತ್ತಿದ್ದ. ಹೀಗಾಗಿ 36 ರಾಬರಿ ಪ್ರಕರಣಗಳಲ್ಲೂ ಸೆಲ್ಲೋ ಅಪರಾಧಿ ಎಂಬುದು ಸಾಬೀತಾಗಿದೆ.
ಒಟ್ಟಾರೆ 71 ಪ್ರಕರಣಗಳಲ್ಲಿ ಅಪರಾಧ ಸಾಬೀತಾದ ಕಾರಣ ಕೋರ್ಟ್‌ ಆತನಿಗೆ ಈ ಪ್ರಕಣಗಳ ಒಟ್ಟು ಶಿಕ್ಷೆ ಪ್ರಮಾಣವನ್ನು 1,088 ವರ್ಷಗಳಷ್ಟು ಎಂದು ಜೈಲು ಶಿಕ್ಷೆ ವಿಧಿಸಿದೆ. ಮನುಷ್ಯನ ಆಯುಷ್ಯ ನೂರು ವರ್ಷ ಎಂದು ತೆಗೆದುಕೊಂಡರೂ ಆತನ ಅಪರಾಧಕ್ಕೆ ಒಬ್ಬ ಮನುಷ್ಯನ ಜೀವಿತಾವಧಿಯಯ ಹತ್ತು ಪಟ್ಟು ಹೆಚ್ಚುಶಿಕ್ಷೆ ವಿಧಿಸಿವಷ್ಟು ಆತ ಅಪರಾಧ ಮಾಡಿದ್ದಾನೆ ಎಂದು ಕೋರ್ಟ್‌ ತೀರ್ಮಾನಕ್ಕೆ ಬಂದಿದೆ. ಸೆಲ್ಲೋಗೆ ಭಾರೀ ಪ್ರಮಾಣದ ಶಿಕ್ಷೆ ಪ್ರಕಟವಾಗುತ್ತಿದಂತೆ ನೊಂದ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement