ಮಾನ್ಸೂನ್‌ 2 ದಿನ ವಿಳಂಬ: ಜೂನ್ 3ರಂದು ಕೇರಳಕ್ಕೆ ಪ್ರವೇಶ

ನವ ದೆಹಲಿ: ಭಾರತದಲ್ಲಿ ನೈಋತ್ಯ ಮಾನ್ಸೂನ್ ಮಳೆಯು ಎರಡು ದಿನ ವಿಳಂಬವಾಗಲಿದೆ. ಮೇ 31ರ ಬದಲಿಗೆ ಜೂನ್ 3ರಂದು ಕರಾವಳಿಗೆ ಮಾನ್ಸೂನ್ ಅಪ್ಪಳಿಸಲಿದೆ ಎಂದು ಭಾನುವಾರ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಯಾಸ್ ಮತ್ತು ತೌಕ್ಟೆ ಚಂಡಮಾರುತದ ಪ್ರಭಾವದಿಂದ ಮೇ 31ರಂದು ಕರಾವಳಿಗೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಈ ಮೊದಲು ಹವಾಮಾನ ಇಲಾಖೆ ತಿಳಿಸಿತ್ತು.
ಆದರೆ ಈಗ ಹವಾಮಾನ ಸೂಚನೆಗಳ ಪ್ರಕಾರ, ಜೂನ್ 1 ರಿಂದ ನೈಋತ್ಯ ಮಾರುತಗಳು ಕ್ರಮೇಣ ಪ್ರಬಲಗೊಳ್ಳುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಜೂನ್ 3ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಲಿದ್ದು, ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದುತಿಳಿಸಿದೆ.
ದಕ್ಷಿಣ ಪಶ್ಚಿಮ ಮಾರುತಗಳು ಪ್ರಬಲಗೊಂಡಿರುವ ಹಿನ್ನೆಲೆ ಮಾನ್ಸೂನ್ ಪ್ರವೇಶದಲ್ಲಿ ವಿಳಂಬವಾಗಲಿದೆ. ಜೂನ್ 1ರಿಂದಲೇ ಕೇರಳದಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ಹವಾಮಾನ ಇಲಾಖೆ ಮುಖ್ಯಸ್ಥ ಡಾ. ಎಂ ಮೋಹಪಾತ್ರಾ ತಿಳಿಸಿದ್ದಾರೆ.
ದೇಶದಲ್ಲಿ ಸುರಿಯುವ ಒಟ್ಟು ಮಳೆಯಲ್ಲಿ ಶೇ.70ರಷ್ಟು ಮಳೆ ಮಾನ್ಸೂನ್ ಮಾರುತಗಳಿಂದಲೇ ಬೀಳುತ್ತದೆ. ಮಳೆಯನ್ನೇ ನೆಚ್ಚಿಕೊಂಡು ಕೃಷಿ ಮಾಡುವ ಬಹುಪಾಲು ರೈತರು ಈ ಮಾನ್ಸೂನ್ ಮಳೆಯನ್ನೇ ಅವಲಂಬಿತರಾಗಿದ್ದಾರೆ.

ಪ್ರಮುಖ ಸುದ್ದಿ :-   ಬೆಳಗಾವಿ ಅಗ್ನಿ ಅವಘಡ : ಗಾಯಗೊಂಡಿದ್ದ ತಂದೆ, ಮಗ ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement