ಕೊರೊನಾ ರೋಗಿ ಶವ ಸೇತುವೆಯಿಂದ ನದಿಗೆ ಎಸೆದ ಕುಟುಂಬದವರು.. ಕ್ಯಾಮರಾದಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ..!

ಬಲರಾಂಪುರ್: ಉತ್ತರಪ್ರದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ನದಿಗೆ ಎಸೆಯುವ ಆಘಾತಕಾರಿ ದೃಶ್ಯ ವಿಡಿಯೊದಲ್ಲಿ ಬಹಿರಂಗವಾಗಿದೆ.

ಗಂಗಾ ನದಿ ತೀರದಲ್ಲಿ ಮರಳಿನಲ್ಲಿ ಆಳವಿಲ್ಲದ ಸಮಾಧಿಗಳಲ್ಲಿ ಸಾವಿರಾರು ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಕೆಲವು ಮೃತದೇಹಗಳನ್ನು ನದಿಗೆ ಎಸೆಯಲಾಗಿದೆ ಎಂದು ಕೆಲವು ವಾರಗಳ ಹಿಂದೆ ವಿಶ್ವದಾದ್ಯಂತ ಸುದ್ದಿಯಾಗಿತ್ತು. ಮೃತದೇಹಗಳು ಬಿಹಾರದ ವರೆಗೆ ಗಂಗಾನದಿಯಲ್ಲಿ ತೇಲಿಕೊಂಡು ಹೋಗಿತ್ತು. ಅಲ್ಲಿನ ಗಂಗಾನದಿ ತೀರದಲ್ಲಿ ಹೆಣಗಳು ಹೋಗಿ ಬಿದ್ದಿದ್ದವು. ಬಕ್ಸಾರ್ ಜಿಲ್ಲೆಯಲ್ಲಿ 71 ಶವಗಳನ್ನು ಗಂಗಾ ನದಿಯಿಂದ ಶಪಡಿಸಿಕೊಂಡು ಅಂತ್ಯಸಂಸ್ಕಾರ ಮಾಡಲಾಗಿತ್ತು.ಈ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು ಹಾಗೂ ರೋಗ ರುಜಿನಗಳ ಭೀತಿ ಎದುರಾಗಿತ್ತು. ಆ ನಂತರದಲ್ಲಿ ನದಿಗಳಲ್ಲಿ ಮೃತದೇಹಗಳನ್ನು ಎಸೆಯದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಉತ್ತರದ ಅನೇಕ ರಾಜ್ಯಗಳಿಗೆ ಆದೇಶಿಸಿದೆ. ಇಂತಹ ಘಟನೆ ಮರುಕಳಿಸದಂತೆ ನದಿ ತೀರಗಳಲ್ಲಿ ಗಸ್ತು ಹೆಚ್ಚಿಸುವಂತೆ ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.
ಹಣದ ಕೊರತೆ, ಜಾಗದ ಕೊರತೆ ಮತ್ತು ಅರಿವಿನ ಕೊರತೆಯಿಂದಾಗಿ ಅನೇಕರು ನದಿಗೆ ಮೃತದೇಹಗಳನ್ನು ಎಸೆಯುತ್ತಿದ್ದಾರೆ.
ಆದರೆ ಮೇ 28 ರಂದು ಬಲರಾಂಪುರ್ ಜಿಲ್ಲೆಯಲ್ಲಿ ಪಿಪಿಇ ಸೂಟ್ ನಲ್ಲಿದ್ದ ವ್ಯಕ್ತಿ ಹಾಗೂ ಮತ್ತೊಬ್ಬ ಸೇತುವೆ ಮೇಲಿಂದ ತಾಪ್ತಿ ನದಿಗೆ ಮೃತದೇಹ ಎಸೆಯುತ್ತಿರುವ ದೃಶ್ಯಗಳನ್ನು ಅದೇ ಮಾರ್ಗವಾಗಿ ಸಂಚರಿಸುತ್ತಿದ್ದವರು ಚಿತ್ರೀಕರಣ ಮಾಡಿದ್ದಾರೆ.ಇಬ್ಬರು ಪುರುಷರು ಮೃತದೇಹವನ್ನು ಎಸೆಯುತ್ತಿದ್ದು, ಅವರಲ್ಲಿ ಒಬ್ಬರು ಪಿಪಿಇ ಕಿಟ್ ಧರಿಸಿರುವುದು ಕಂಡುಬಂದಿದೆ.
ಬಲರಾಮ್ಪುರ ಮುಖ್ಯ ವೈದ್ಯಾಧಿಕಾರಿ ಅದು, ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಎಂದು ದೃಢಪಡಿಸಿದ್ದಾರೆ. ಶವವನ್ನು ನದಿಯಿಂದ ತೆಗೆದು ಅವರಿಗೆ ಹಸ್ತಾಂತರಿಸಲಾಗಿದೆ. ಮೇ 25 ರಂದು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂರು ದಿನಗಳ ನಂತರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ.ಆನಂತರದಲ್ಲಿ ಕೋವಿಡ್ ಪ್ರೋಟೋಕಾಲ್ ಪ್ರಕಾರ ಮೃತದೇಹನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಅವರು ನಿಗದಿತ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿಸದೇ ಮೃತದೇಹವನ್ನು ನದಿಗೆ ಎಸೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಬಲರಾಮ್ ಪುರ ಮುಖ್ಯ ವೈದ್ಯಾಧಿಕಾರಿ ವಿ.ಬಿ. ಸಿಂಗ್ ತಿಳಿಸಿದ್ದಾರೆ. ಮೃತರ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement